ಸಿದ್ದಾಪುರ : ಭಟ್ಕಳ ಕಡೆಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದ ಕಾರು ತಾಲೂಕಿನ ಮಾವಿನಗುಂಡಿ ಸಮೀಪದ ಹೆಜಿನಿ ಬಳಿ ಪಲ್ಟಿಯಾಗಿ ಕಾರಿನಲ್ಲಿದ್ದ ಓರ್ವ ಶಿಕ್ಷಕ ಸ್ಥಳದಲ್ಲಿ ಮೃತ ಪಟ್ಟ ಘಟನೆ ನಡೆದಿದೆ.
ಮಂಜುನಾಥ ಅಣ್ಣಪ್ಪ ದೇವಾಡಿಗ ಬೈಲೂರು (ಮುರ್ಡೇಶ್ವರ ) ಶಾಲಾ ಶಿಕ್ಷಕ ಸ್ಥಳದಲ್ಲಿ ಮೃತ ಪಟ್ಟ ಶಿಕ್ಷಕ ಎಂದು ತಿಳಿದು ಬಂದಿದೆ.
ವಾಹನದಲ್ಲಿದ್ದ ಉಳಿದ ಐದು ಜನ ಶಿಕ್ಷಕರನ್ನ ಸಿದ್ದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆಯಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಯ ಮೌಲ್ಯ ಮಾಪನಕ್ಕೆ ಕೆ.ಎ 47 ಎಂ 8151ನೋಂದಣಿಯ ಇಕೋ ವಾಹನದಲ್ಲಿ ಹೋಗುತ್ತಿರುವಾಗ ಬೆಂಗಳೂರು ಹೊನ್ನಾವರ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯಲ್ಲಿ ಸಂಜಯ ದೇವಿದಾಸ ಶೆಟ್ಟಿ, ಮಹೇಶ ದಾನು ನಾಯ್ಕ್,ಚನ್ನವೀರಪ್ಪ ರಾಯಪ್ಪ ಹೊಸಮನಿ,ನಾರಾಯಣ ಮಹಾದೇವ ಮೊಗೇರ,ಮಹಮದ್ ಸಾದಿಕ್ ಎನ್ನುವವರಿಗೆ ಗಾಯಗಳಾಗಿವೆ.
PublicNext
11/12/2024 10:07 pm