ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ : ಪೊಲೀಸರ ಮಿಂಚಿನ ಕಾರ್ಯಾಚರಣೆ 24 ಗಂಟೆಯಲ್ಲಿ ಆರೋಪಿ ಬಂಧನ

ಅಂಕೋಲಾ : ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ತಾಲೂಕಿನ ಹಿಲ್ಲೂರಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು 24 ಗಂಟೆಯಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸಿ, ದೇವರ ಮೂರ್ತಿಗಳನ್ನು ವಶ ಪಡಿಸಿಕೊಂಡ ಘಟನೆ ನಡೆದಿದೆ.

ಕದ್ರಾ ಕೆಪಿಸಿ ನೌಕರ ಶ್ರೀನಿವಾಸ ತಂದೆ ಗುರುಸ್ವಾಮಿ, ದಾರವಾಡ ನಿವಾಸಿ ಹಾಲಿ ಚಿತ್ತಾಕುಲ ನಿವಾಸಿ ಅಶೋಕ ಹನುಮಂತಪ್ಪ ಬಂಡಿವಡ್ಡರ, ಕದ್ರಾದ ಮೌಲಾಲಿ ಮಹ್ಮದ ಅಜಾದ ಸೈಯದ, ಬೆಂಗಳೂರಿನ ನಿವಾಸಿ ಹಾಲಿ ಕದ್ರಾ ನಿವಾಸಿ ಮುಬಾರಕ ಇಬ್ರಾಹಿಂ ಶೇಖ್‌, ಬೆಂಗಳೂರು ವೈಟ್ ಪೀಲ್ಡನ ಹಾಲಿ ಕದ್ರಾ ನಿವಾಸಿ ಎ.ಎಸ್. ಶೇಖ್ ಶರೀಫ್ ಎ.ಎಸ್. ಅಬ್ದುಲ್ ರಹೀಮ್, ಫುರಖಾನ ಮೆಹಬೂಬಖಾನ ಬಂಧಿತ ಆರೋಪಿಗಳು. ಇವರಿಂದ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದು ಜೊತೆಗೆ ಇನ್ನೋವಾ ಕ್ರೀಸ್ಟಾ , ಮಾರುತಿ ಸುಜುಕಿ ಸ್ವೀಪ್ಟ್, ಮಹೀಂದ್ರಾ ಹೈಲೋ, ಡಿಯೋ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಡಿಸೆಂಬರ 09 ರ ನಸುಕಿನ 02-30 ಗಂಟೆಯ ನಡುವಿನ ಅವದಿಯಲ್ಲಿ ಹಿಲ್ಲೂರಿನ ವಿಠಲ್ ತಂದೆ ಬಾಂದಿಅವರ ಮನೆಯಲ್ಲಿ ಮನೆ ಜನರು ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಮೂರ್ತಿ ಸೇರಿದಂತೆ 1,30000 ಮೌಲ್ಯದ ಹಲವು ವಸ್ತುಗಳನ್ನು ಕದ್ದೊಯ್ದಿದ್ದರು.

ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ತಕ್ಷಣ ಈ ಪ್ರಕರಣವನ್ನು ಭೇದಿಸಲು ಪೊಲೀಸ್ ಅಧೀಕ್ಷಕ ಎಮ್. ನಾರಾಯಣ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್.ಜಗದೀಶ ಉಪಾಧೀಕ್ಷಕ ಗಿರೀಶ ಎಸ್.ವಿ. ರವರುಗಳ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ರವರ ನೇತೃತ್ವದಲ್ಲಿ ಪಿಎಸ್ಐ ಉದ್ದಪ್ಪ ದರೆಪ್ಪನವರ ತನಿಖಾಧಿಕಾರಿಯಾದ ಜಯಶ್ರೀ ಪ್ರಭಾಕರ, ಸಿ.ಹೆಚ್.ಸಿಗಳಾದ ಮಹಾದೇವ ಸಿದ್ದಿ, ಅಂಬರೀಶ ನಾಯ್ಕ, ಪ್ರಶಾಂತ ನಾಯ್ಕ, ಸಿಪಿಸಿಗಳಾದ ಶ್ರೀಕಾಂತ ಕಟಬರ, ಮನೋಜ ಡಿ, ಆಸಿಫ್ ಆರ್ ಕೆ, ರೋಹಿದಾಸ ದೇವಾಡಿಗ, ಶಿವಾನಂದ ನಾಗರದಿನ್ನಿ, ಜೀಪ ಚಾಲಕರಾದ ಸತೀಶ ನಾಯ್ಕ, ರವಿ ಹಡಪದ ಹಾಗೂ ಕಾರವಾರ ಗ್ರಾಮೀಣ ಠಾಣೆಯ ಹನುಮಂತ ಸರೀಕರ ಇವರುಗಳ ತಂಡ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೃತ್ಯ ನಡೆದ 24 ಗಂಟೆಯ ಒಳಗಾಗಿ ಪ್ರಕರಣವನ್ನು ಬೇದಿಸಿದ್ದು, ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿ ಎಮ್. ನಾರಾಯಣ ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/12/2024 10:23 pm

Cinque Terre

4.94 K

Cinque Terre

0

ಸಂಬಂಧಿತ ಸುದ್ದಿ