ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಐಆರ್‌ಬಿ ಕಂಪನಿಯ ವಿರುದ್ಧ ಕ್ರಮವಾಗದಂತೆ ಪೊಲೀಸ್ ಇಲಾಖೆ ಷಡ್ಯಂತ್ರ

ಕಾರವಾರ: ಶಿರೂರು ದುರಂತಕ್ಕೆ ಕಾರಣವಾದ ಐಆರ್‌ಬಿ ಕಂಪನಿ ವಿರುದ್ಧ ಸರಕಾರ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಈ ಕಂಪನಿ ವಿರುದ್ಧ ಕ್ರಮವಾಗದಂತೆ ಪೊಲೀಸ್ ಇಲಾಖೆ ಸಹ ಷಡ್ಯಂತ್ರ ಮಾಡುತ್ತಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮಿ ಆರೋಪಿಸಿದ್ದಾರೆ.

ನಗರದದಲ್ಲಿ ಸೋಮವಾರ ಮಾತನಾಡಿದ ಅವರು, ಶಿರೂರು ಘಟನೆ ಪ್ರಾಕೃತಿಕವಾಗಿ ನಡೆದಿದೆ. ಐಆರ್‌ಬಿ ಕಂಪನಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದೆ ಇದ್ದರಿಂದ ನಡೆದಿದೆ. ಇದರಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಆದರೆ ಐಆರ್‌ಬಿ ಹಾಗೂ ಕಂಪನಿಯ ಎಂಟು ಜನರು ವಿರುದ್ಧ ದೂರು ನೀಡಲಾಗಿದೆ. ಅವರ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಜಿಲ್ಲೆಯ ಎಸ್ಪಿ ಅವರೇ ಕಾರಣ ಎಂದು ದೂರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅವರು ಐಆರ್‌ಬಿ ಕಂಪನಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಸ್ವಾಮಿ ಅವರು, ಪ್ರಕರಣದ ಬಗ್ಗೆ ನ್ಯಾಯಾಧೀಶರನ್ನು ಭೇಟಿಯಾಗಿ ಕಂಪನಿಯ ಪರವಾಗಿ ಮನವರಿಕೆ ಮಾಡಲು ಯತ್ನಿಸಿದ್ದಾರೆ ಎನ್ನುವ ಮಾಹಿತಿ ಸಹ ಇದೆ. ಎಸ್ಪಿ ಅವರಿಗೆ ದಿನಕ್ಕೆ 15 ಸಲ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಅದೇ ರೀತಿ ಅಂಕೋಲಾ ಪಿಎಸ್ಐ ಸಹ ಕರೆಗೆ ಸ್ಪಂದಿಸಿಲ್ಲ ಎಂದರು. ಜನರು ಕರೆ ಸ್ವೀಕರಿಸದ ಅಧಿಕಾರಿಗಳು ನಮಗೆ ಬೇಡ ಎಂದರು.

ಎಸ್ಪಿ ಅವರು ವರಿಷ್ಠಾಧಿಕಾರಿ ಕಚೇರಿಯನ್ನು ಹೈಟೆಕ್ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಎಲ್ಲಿಂದ ಹಣ ಬಂದಿದೆ. ಈ ಖಾಸಗಿ ಕಂಪೆನಿಯ ಸಿಎಸ್ಆರ್ ಅನುದಾನದ ಹಣ ಪಡೆಯಲಾಗಿದೆ ಎಂದು ಆರೋಪಿಸಿದ ಅವರು, ಸಿಎಸ್ಆರ್ ಹಣ ಪಡೆಯು ಡಿಜಿ ಅವರ ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಮಾಹಿತಿ ಹಕ್ಕಿನ ಅಡಿ ಸಂಪೂರ್ಣ ಮಾಹಿತಿ ಪಡೆಲಾಗುವುದು ಎಂದರು.

ಯಾವುದೇ ಕಾರಣಕ್ಕೂ ನಾವು ಐ.ಆರ್.ಬಿ ಕಂಪನಿಯ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ. ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸುತ್ತೇವೆ. ಭಿಕ್ಷೆ ಬೇಡಿಯಾದರೂ ಹೋರಾಟ ಮುಂದುವರೆಸುತ್ತೇವೆ. ಅನ್ಯಾಯಕ್ಕೆ ಒಳಗಾದ ಶಿರೂರು, ಉಳುವರೆ ಸಂತ್ರಸ್ಥರಿಗೆ ನ್ಯಾಯ ಕಲ್ಪಿಸಲು ಪ್ರಯತ್ನಿಸುತ್ತೇವೆ. ಇಷ್ಟೆಲ್ಲ ದುರಂತಕ್ಕೆ ಕಾರಣವಾದ ಐಆರ್.ಬಿ ಕಂಪೆನಿಯನ್ನು ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಬೇಕು ಎಂದು ಒತ್ತಾಯ ಮಾಡಿದರು.

Edited By : Manjunath H D
PublicNext

PublicNext

10/12/2024 10:33 pm

Cinque Terre

18.59 K

Cinque Terre

0

ಸಂಬಂಧಿತ ಸುದ್ದಿ