ಸಿದ್ದಾಪುರ : ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯವಾದ ಘಟನೆ ತಾಲೂಕಿನ ಬೀರ್ಲಮಕ್ಕಿ ಬಳಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸ್ವವಾರ ದಾಮೋದರ ಬೊಮ್ಮ ಗೌಡ ಹೊನ್ನಗೋಡ ಎನ್ನುವವರಿಗೆ ಗಾಯವಾಗಿದೆ.
ಘಟನೆಯ ಕುರಿತು ಕಾರ್ ಚಾಲಕ ಡಾ. ರವಿರಾಜ್ ಶೇಟ್ ದೂರು ನೀಡಿದ್ದಾರೆ.
ಸಿದ್ದಾಪುರ ಕಡೆಯಿಂದ ಕಾರವಾರ ಕಡೆಗೆ ಹೋಗುತ್ತಿದ್ದ ಕಾರಿಗೆ ಶುಕ್ರವಾರ ಸಿದ್ದಾಪುರದ ಬಿರ್ಲಮಕ್ಕಿ ಬಳಿ ಬೈಕ್ ಸವಾರನು ತನ್ನ ಬೈಕನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಮುಂಬದಿಯ ಎಡಭಾಗಕ್ಕೆ ಗುದ್ದಿ ಅಪಘಾತ ಪಡಿಸಿ ತನ್ನ ಕೈ,ತಲೆ, ತುಟಿ ಬುಜಕ್ಕೆ ಗಾಯಪಡಿಸಿಕೊಂಡಿರುವುದಾಗಿ ದೂರು ದಾಖಲಿಸಿದ್ದಾರೆ.
Kshetra Samachara
06/12/2024 09:53 pm