ಮುಂಡಗೋಡ : ಹೆಜ್ಜೇನು ದಾಳಿ ಮಾಡಿದ್ದು, ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು 9 ಜನ ಕಿಮ್ಸ್‌ಗೆ ದಾಖಲಾದ ಘಟನೆ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಪ್ಲಾಟ್ ದಲ್ಲಿ ನಡೆದಿದೆ.
ತಾಲೂಕಿನ ಲಕ್ಕೊಳ್ಳಿ ಗ್ರಾಮದ ಪ್ಲಾಟ್ ಬಳಿ ನೀರಿನ ಟ್ಯಾಂಕ್ ಮೇಲೆ ಹೆಜ್ಜೇನು ಮನೆ ಮಾಡಿತ್ತು. ಬೆಳಗಿನ ಜಾವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲೆ ಮತ್ತು ಕೆಲಸಕ್ಕೆ ತೆರಳುವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಪರಿಣಾಮ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೊರಟಿದ್ದ ಜನರು ಗಾಯಗೊಂಡಿದ್ದಾರೆ.
ಸ್ಥಳಕ್ಕೆ 108 ವಾಹನ ಭೇಟಿ ನೀಡಿ ಅವರನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದಾರೆ.
Kshetra Samachara
14/12/2024 10:13 pm