ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಗಾಂಜಾ ಮಾರಾಟಕ್ಕೆ ಯತ್ನ; ಯುವಕನ ಬಂಧನ

ಕಾರವಾರ (ಉತ್ತರಕನ್ನಡ): ಭಟ್ಕಳದ ಗುಳ್ಮಿ ಕ್ರಾಸ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಡಿವೈಎಸ್ಪಿ ನೇತೃತ್ವದದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಹೆಬಳೆ ಹನೀಫಾಬಾದ್ ನಿವಾಸಿ ಸಯ್ಯದ್ ಮೂಸಾ ಬಂಧಿತ ಆರೋಪಿ. ಈತ ಸುಮಾರು 2,500 ರೂಪಾಯಿ ಮೌಲ್ಯದ 209 ಗ್ರಾಂ ತೂಕದ ಒಣಗಿದ ಗಾಂಜಾವನ್ನು ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

ನಗದು 200 ರೂಪಾಯಿ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

25/09/2022 01:33 pm

Cinque Terre

6.88 K

Cinque Terre

0

ಸಂಬಂಧಿತ ಸುದ್ದಿ