ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಬ್ಯಾಂಕ್ ನಿಂದ ಹಣ ಕದ್ದ ಮ್ಯಾನೇಜರ್ ಅರೆಸ್ಟ್; ಆ ಕೋಟಿ ಕೋಟಿ ಕಾಂಚಾಣ ಏನ್ಮಾಡಿದ ಗೊತ್ತಾ?

ಕಾರವಾರ (ಉತ್ತರಕನ್ನಡ): ಭಾರೀ ಸದ್ದು ಮಾಡಿದ್ದ ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದ್ದ 2.69 ಕೋಟಿ ರೂ. ವಂಚನೆ ಪ್ರಕರಣದ ಆರೋಪಿ, ಅಸಿಸ್ಟೆಂಟ್ ಮ್ಯಾನೇಜರ್ ನನ್ನ ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ವಿಚಾರಣೆಯ ವೇಳೆ ಆರೋಪಿ ಶಾಕಿಂಗ್ ಮಾಹಿತಿಯೊಂದನ್ನ ರಿವೀಲ್ ಮಾಡಿದ್ದು, ಇದು ಸದ್ಯ ಮತ್ತೊಂದು ತಲೆನೋವಿಗೆ ಕಾರಣವಾಗಿದೆ.

ಹೌದು, ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಕರೆಂಟ್ ಅಕೌಂಟ್ ನಿಂದ ತನ್ನ ಹೆಂಡತಿಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್, ಆಂಧ್ರಪ್ರದೇಶ ಮೂಲದ ಕುಮಾರ್ ಬೋನಾಲನನ್ನ ಕೊನೆಗೂ ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿಚಾರಣೆಯನ್ನ ಪೊಲೀಸರು ಮುಂದುವರಿಸಿದ್ದಾರೆ.

ಇನ್ನು ಆರೋಪಿಯ ವಿಚಾರಣೆಯ ವೇಳೆ ತಾನು ಲಪಟಾಯಿಸಿದ್ದ ಹಣವನ್ನೆಲ್ಲ ಆನ್ಲೈನ್ ಆಟದ ಗೀಳಿಗೆ ಬಿದ್ದು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಸಿಕ್ಕ ಸಿಕ್ಕ ಆನ್ಲೈನ್ ಗೇಮ್ ಗಳನ್ನ ಆಡುವ ಚಟಕ್ಕೆ ಬಿದ್ದಿದ್ದ ಈತ, ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯುವುದು, ಆನ್ಲೈನ್ ನಲ್ಲಿ ಆಟವಾಡುವುದು ಮಾಡುತ್ತಿದ್ದ. ಹೀಗೆ ಎಲ್ಲಾ ಹಣವನ್ನೂ ಆರೋಪಿ ಕಳೆದುಕೊಂಡಿದ್ದಾನೆ ಎಂಬುದು ರಿವೀಲ್ ಆಗಿದೆ.

ಸದ್ಯ ಆನ್ಲೈನ್ ಗೇಮ್ ಆಡಿ ಆರೋಪಿ ತನ್ನ ಬಳಿಯಿದ್ದ ಎಲ್ಲಾ ಹಣವನ್ನ ಕಳೆದುಕೊಂಡಿದ್ದು, ಇದೀಗ 2.69 ಕೋಟಿ ಹಣದ ವಸೂಲಿ ಹೇಗೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಖಾತೆದಾರರಿಗೆ ಆತಂಕ ಬೇಡ. ಲೂಟಿಯಾಗಿರೋದು ಬ್ಯಾಂಕ್ ಕರೆಂಟ್ ಅಕೌಂಟ್ ಹಣ ಹೊರತು ಗ್ರಾಹಕರದ್ದಲ್ಲ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್.

Edited By : Somashekar
PublicNext

PublicNext

20/09/2022 06:38 pm

Cinque Terre

24.82 K

Cinque Terre

0

ಸಂಬಂಧಿತ ಸುದ್ದಿ