", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/378325-1736605091-18.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivanandaHaliyal" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಲ್ಲಾಪುರ: ಉದ್ಯಮಿ ಜಮೀರ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಅಪಹರಣಕಾರರನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ದಾಳಿ ನಡೆದಿದೆ. ಘಟನೆಯಲ್ಲಿ ತಪ್...Read more" } ", "keywords": "Yellapur news, entrepreneur kidnapped, notorious kidnappers, police firing, crime news, Karnataka police, Yellapur crime, kidnapping case, police encounter.,Uttara-Kannada,Crime,Law-and-Order", "url": "https://publicnext.com/article/nid/Uttara-Kannada/Crime/Law-and-Order" } ಯಲ್ಲಾಪುರ: ಉದ್ಯಮಿ ಅಪಹರಣ ಪ್ರಕರಣ- ನಟೋರಿಯಸ್ ಕಿಡ್ನಾಪರ್ಸ್ ಮೇಲೆ ಪೊಲೀಸರ ಫೈರಿಂಗ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ: ಉದ್ಯಮಿ ಅಪಹರಣ ಪ್ರಕರಣ- ನಟೋರಿಯಸ್ ಕಿಡ್ನಾಪರ್ಸ್ ಮೇಲೆ ಪೊಲೀಸರ ಫೈರಿಂಗ್

ಯಲ್ಲಾಪುರ: ಉದ್ಯಮಿ ಜಮೀರ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಅಪಹರಣಕಾರರನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ದಾಳಿ ನಡೆದಿದೆ. ಘಟನೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಇಬ್ಬರ ಮೇಲೆ ಪೊಲೀಸರು ಗುಂಡಿಕ್ಕಿದ್ದಾರೆ.

ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು, ಇಬ್ಬರು ಅಪಹರಣಕಾರರು ಗಾಯಗೊಂಡಿದ್ದಾರೆ. ಡಿಸೆಂಬರ್ 9ರಂದು ರಾತ್ರಿ ಮುಂಡಗೋಡು ಪಟ್ಟಣದಲ್ಲಿ ಉದ್ಯಮಿ ಜಮೀರ್ ಎಂಬುವವರನ್ನ ಕಾರಿನಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಪೊಲೀಸರು, ಕಿಡ್ನಾಪರ್ಸ್ ಬೆನ್ನಟ್ಟಿ ಹೋಗಿದ್ದರು. ಅಪಹರಣಕಾರರು ಉದ್ಯಮಿ ಮೇಲೆ ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ಮಾಡಿ ಗದಗದ ರಿಂಗ್ ರೋಡ್ ನಲ್ಲಿ ಬಿಟ್ಟು ಪರಾರಿಯಾಗಿದ್ದರು.

ಆರೋಪಿಗಳನ್ನ ಬಂಧಿಸಿ ಕರೆತರುವಾಗ ಯಲ್ಲಾಪುರ ತಾಲೂಕಿನ ಹಳಿಯಾಳ ರಸ್ತೆಯ ಡೋಗಿನಾಳ ಬಳಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಆರೋಪಿಗಳು ಶರಣಾಗಲು ಒಪ್ಪಲಿಲ್ಲ. ಹೀಗಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇಬ್ಬರ ಕಾಲಿಗೆ ಗುಂಡು ಹಾರಿಸಲಾಗಿದೆ. ರಹೀಮ್ ಹಾಗೂ ಅಜಯ ಗುಂಡೇಟು ತಿಂದವರು. ಈವರೀರ್ವರು ಧಾರವಾಡ ಮರ್ಡರ್ ಕೇಸಿನ ನಟೋರಿಯಸ್ ಆರೋಪಿಗಳೆಂದು ಗೊತ್ತಾಗಿದೆ.

ಘಟನೆಯಲ್ಲಿ ಮುಂಡಗೋಡು ಪಿಐ ರಂಗನಾಥ ನೀಲಮ್ಮನವರ್, ಪಿಎಸ್‌ಐ ಪರಶುರಾಮ್, ಯಲ್ಲಾಪುರ ಪೊಲೀಸ್‌ ಶಫಿ ಶೇಖ್ ಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಗುಂಡು ತಗುಲಿದ ಆರೋಪಿಗಳಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಕ್ರಿಮ್ಸ್ ಗೆ ರವಾನೆ ಮಾಡಲಾಗಿದೆ.

Edited By : Somashekar
Kshetra Samachara

Kshetra Samachara

11/01/2025 07:48 pm

Cinque Terre

35.88 K

Cinque Terre

0

ಸಂಬಂಧಿತ ಸುದ್ದಿ