", "articleSection": "Infrastructure,Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1738513127-haliyal.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivanandaHaliyal" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಳಿಯಾಳ: ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಪುರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಯನ್ನು ಒಡೆದು ಹಾನಿ ಪಡಿಸಿರುವ ಹಾಗೂ ಸರ್ಕಾರಿ ಕರ್ತವ್ಯಕ್...Read more" } ", "keywords": "Haliyal News, Police Station Attack, Goonda Activity, Municipal Shop Demolition, Karnataka Crime News, Haliyal Town, Uttara Kannada District, Karnataka Police, Law and Order, Vandalism, Public Property Damage.,Uttara-Kannada,Infrastructure,Crime,Law-and-Order,Government", "url": "https://publicnext.com/node" }
ಹಳಿಯಾಳ: ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಪುರಸಭೆ ಮಾಲೀಕತ್ವದ ವಾಣಿಜ್ಯ ಮಳಿಗೆಯನ್ನು ಒಡೆದು ಹಾನಿ ಪಡಿಸಿರುವ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ ಅವರು ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ವಾಣಿಜ್ಯ ಮಳಿಗೆಯನ್ನು ಬಾಡಿಗೆ ಆಧಾರದಲ್ಲಿ ನಡೆಸುತ್ತಿದ್ದ ಮಾಲೀಕ ಸುನೀಲ್ ಶಿಂಧೆ ಕೂಡ ಪ್ರತ್ಯೇಕ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳು ಆರೋಪಿಗಳ ವಿರುದ್ದ ದಾಖಲಾಗಿದ್ದು, ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.
ಪಟ್ಟಣದ ಅನ್ನಪೂರ್ಣ ಹೊಟೇಲ್ ಪಕ್ಕದಲ್ಲಿದ್ದ ಪುರಸಭೆ ಮಾಲೀಕತ್ವದಲ್ಲಿರುವ ವಾಣಿಜ್ಯ ಅಂಗಡಿಯಲ್ಲಿ ಹಿಂದಿನ ಗೋಡೆಯನ್ನು ಆಪಾದಿತರಾದ ವೆಂಕಟೇಶ ಚಂದ್ರಶೇಖರ ಬಳ್ಳಾರಿ, ಅರ್ಚನಾ ವೆಂಕಟೇಶ ಬಳ್ಳಾರಿ ಹಾಗೂ ಇನ್ನೂ ಎರಡು ಜನರು ಸೇರಿ ಒಡೆಯುತ್ತಿದ್ದಾರೆ ಅಂತಾ ಪಿರ್ಯಾದಿಗೆ ಅಂಗಡಿಯ ಮಾಲೀಕ ಸುನೀಲ್ ಅಶೋಕ ಶಿಂಧೆ ಮಾಹಿತಿ ನೀಡಿದಾಗ ದಿನಾಂಕ 1ರಂದು ಮಧ್ಯಾಹ್ನ ಸ್ಥಳಕ್ಕೆ ಹೋಗಿ ನೋಡಲಾಗಿ, ಅಲ್ಲಿ ಅಂಗಡಿಯನ್ನು ಆಪಾದಿತರಾದ ವೆಂಕಟೇಶ ಬಳ್ಳಾರಿ, ಅರ್ಚನಾ ಬಳ್ಳಾರಿ ಹಾಗೂ ಅಣ್ಣಪ್ಪ ಕೊರವರ ಹಾಗೂ ಇನ್ನೊಬ್ಬ ಸೇರಿ ಅಂಗಡಿಯನ್ನು ಒಡೆಯುತ್ತಿದ್ದರು. ಆಗ ಮುಖ್ಯಾಧಿಕಾರಿಯು ಆಪಾದಿತರಿಗೆ ಅಂಗಡಿ ಒಡೆಯಬೇಡಿರಿ ಅಂತಾ ಹೇಳಿದರೂ ಸಹ ಅವರು ಮಾತನ್ನು ಕೇಳದೇ ಆಪಾದಿತ ವೆಂಕಟೇಶ, ಮುಖ್ಯಾಧಿಕಾರಿಯನ್ನು ದೂಡಿ ಮತ್ತೆ ಒಡೆಯಲು ಪ್ರಾರಂಭಿಸಿ ಸರ್ಕಾರಿ ಕರ್ತವ್ಯದಲ್ಲಿರುವುದು ಗೊತ್ತಿದ್ದರೂ ಸಹ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಪುರಸಭೆ ಮಾಲೀಕತ್ವದಲ್ಲಿರುವ ವಾಣಿಜ್ಯ ಅಂಗಡಿಯನ್ನು ಒಡೆದು ಹಾಕಿ ಸುಮಾರು 50,000/- ರೂಪಾಯಿಯಷ್ಟು ಮೌಲ್ಯದ ಪುರಸಭೆಯ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಪಟ್ಟಣದ ಅನ್ನಪೂರ್ಣ ಹೊಟೇಲ್ ಪಕ್ಕದಲ್ಲಿ ಸುನೀಲ್ ಜನರಲ್ ಸ್ಟೋರ್ ಅಂಗಡಿಯಲ್ಲಿದ್ದಾಗ ಆಪಾದಿತರಾದ ವೆಂಕಟೇಶ ಬಳ್ಳಾರಿ, ಅರ್ಚನಾ ವೆಂಕಟೇಶ ಬಳ್ಳಾರಿ, ಮೇಘರಾಜ ಮೇತ್ರಿ ಮತ್ತು ಅಣ್ಣಪ್ಪ ಕೊರವರ ಇ ಏಕೋದ್ದೇಶದಿಂದ ಅಂಗಡಿಯ ಹತ್ತಿರ ಬಂದು ಆಪಾದಿತ ಮೇಘರಾಜ ಮೇತ್ರಿ ಫಿರ್ಯಾದಿಯನ್ನು ಉದ್ದೇಶಿಸಿ 'ನೀನು ವೆಂಕಟೇಶ ಚಂದ್ರಶೇಖರ ಬಳ್ಳಾರಿ ಅವರ ಜಾಗದಲ್ಲಿ ಅಂಗಡಿ ಕಟ್ಟಿಕೊಂಡಿದ್ದಿಯಾ ಇವತ್ತು ಮಧ್ಯಾಹ್ನ 1 ಗಂಟೆಯ ಒಳಗಡೆ ಅಂಗಡಿಯನ್ನು ಖಾಲಿ ಮಾಡಿಕೊಂಡು ಹೋಗಬೇಕು ಇಲ್ಲದಿದ್ದಲ್ಲಿ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂಥ ಬೆದರಿಕೆ ಒಡ್ಡಿ ಹೋಗಿದ್ದಲ್ಲದೇ, ಪುನಃ ಸಾಯಂಕಾಲ ಅಂಗಡಿಯಲ್ಲಿದ್ದಾಗ ಆಪಾದಿತರೆಲ್ಲರೂ ಸೇರಿಕೊಂಡು ಫಿರ್ಯಾದಿಯ ಅಂಗಡಿಯ ಒಳಗೆ ಅಕ್ರಮಪ್ರವೇಶ ಮಾಡಿದ್ದಲ್ಲದೇ ಗೋಡೆ, ಕಪಾಟು, ಗ್ಲಾಸ್, ವಿವಿಧ ಸಾಮಾನು ಸೇರಿ ಸುಮಾರು 60,000/- ರೂಪಾಯಿಯಷ್ಟು ನಷ್ಟ ಮಾಡಿದ್ದಾರೆಂದು ಸುನೀಲ್ ಶಿಂಧೆ ದೂರು ನೀಡಿದ್ದಾರೆ.
Kshetra Samachara
02/02/2025 09:48 pm