ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಸಂಸ್ಥಾನ ತರಳಿ ಮಠದ ಶಿವ ಮಂದಿರ ದೇವಸ್ಥಾನ ಜೀರ್ಣದ್ದಾರಕ್ಕೆ ವೀರೇಂದ್ರ ಹೆಗ್ಗಡೆರಿಂದ 5 ಲಕ್ಷ ದೇಣಿಗೆ

ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಸಂಸ್ಥಾನ  ತರಳಿ ಮಠದ ಶಿವ ಮಂದಿರ ದೇವಸ್ಥಾನ ಜೀರ್ಣದ್ದಾರಕ್ಕೆ 5 ಲಕ್ಷ ದೇಣಿಗೆ ನೀಡಿದ್ದಾರೆ.

 ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ  , ತಾಲೂಕು ಯೋಜನಾಧಿಕಾರಿ  ಗಿರೀಶ ಜಿ.ಪಿ.ಅವರು ತರಳಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ  ಎನ್. ಡಿ.ನಾಯ್ಕ್, ಕಾರ್ಯದರ್ಶಿ ಎಚ್  ಎಸ್ .ನಾಯ್ಕ್ ಅವರಿಗೆ 5 ಲಕ್ಷ ಡಿ.ಡಿ. ಯನ್ನು ಹಸ್ತಾಂತರ  ಮಾಡಿ  ಶಿವಮಂದಿರದ ಜೀರ್ಣೋದ್ದಾರ   ಕೆಲಸ ಆದಷ್ಟು ಬೇಗ ಸಂಪೂರ್ಣಗೊಂಡು ದೇವಸ್ಥಾನ  ಲೋಕಾರ್ಪಣೆ ಆಗಲಿ ಎಂದರು.

 ದೇವಸ್ಥಾನ  ಟ್ರಸ್ಟ್ ಅಧ್ಯಕ್ಷ ಎನ್ . ಡಿ  ನಾಯ್ಕ್ ಅವರು ತರಳಿ ಮಠದ  ಇತಿಹಾಸ ಹಾಗೂ ದೇವಸ್ಥಾನ ಜೀರ್ಣೋದ್ಧಾರ  ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. 

 ಡಿ.ಡಿ ವಿತರಣಾ ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಸದಸ್ಯ ಎಂ.ಐ  ನಾಯ್ಕ್ , ದಿನೇಶ ನಾಯ್ಕ್ , ದೀಪಕ್ ತರಲಿ, ಎ  ಜಿ . ನಾಯ್ಕ್ , ಬಂಗಾರ್ಯ ನಾಯ್ಕ್ , ಸತೀಶ್ ನಾಯ್ಕ್ , ಮೇಲ್ವಿಚಾರಕ ಪ್ರದೀಪ ಎಂ , ಕೃಷಿ ಮೇಲ್ವಿಚಾರಕ ಮಹಾದೇವ ಬಿ, ವಿಮಾ ಸಮನ್ವಯಾಧಿಕಾರಿ ರಾಮಕೃಷ್ಣ , ಸೇವಾಪ್ರತಿನಿಧಿ  ಸೋಮಶೇಖರ್, ಒಕ್ಕೂಟ ಅಧ್ಯಕ್ಷ ವೀರಭದ್ರ ಗೌಡ , ಸಂಘದ ಸದಸ್ಯರು , ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/02/2025 11:56 am

Cinque Terre

2.68 K

Cinque Terre

0

ಸಂಬಂಧಿತ ಸುದ್ದಿ