", "articleSection": "Infrastructure,Jobs,Lifestyle", "image": { "@type": "ImageObject", "url": "https://prod.cdn.publicnext.com/s3fs-public/43124920250125072542filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾರವಾರ: ಆಮಿಶಗಳಿಗೆ ಬಲಿಯಾಗದೇ ಅರ್ಹತೆಯನ್ನು ನೋಡಿ ಮತ ಚಲಾಯಿಸಿ ಆಡಳಿತಕ್ಕೆ ಉತ್ತಮ ಜನಪ್ರತಿನಿದಿಯನ್ನು ಕೊಡುಗೆ ನೀಡಬೇಕು ಎಂದು ಜಿಲ್ಲಾ ನ್ಯಾ...Read more" } ", "keywords": "Node,Uttara-Kannada,Infrastructure,Jobs,Lifestyle", "url": "https://publicnext.com/node" }
ಕಾರವಾರ: ಆಮಿಶಗಳಿಗೆ ಬಲಿಯಾಗದೇ ಅರ್ಹತೆಯನ್ನು ನೋಡಿ ಮತ ಚಲಾಯಿಸಿ ಆಡಳಿತಕ್ಕೆ ಉತ್ತಮ ಜನಪ್ರತಿನಿದಿಯನ್ನು ಕೊಡುಗೆ ನೀಡಬೇಕು ಎಂದು ಜಿಲ್ಲಾ ನ್ಯಾಯಾದೀಶ ಡಿ.ಎಸ್ ವಿಜಯ ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಚುನಾವಣಾಧಿಕಾರಿಕಾರಗಳ ಪ್ರಾತ್ರ ಬಹುಮುಖ್ಯವಾದುದು. ಚುನಾವಣೆ ಪ್ರಜಾ ಪ್ರಭುತ್ವಕ್ಕೆ ಬುನಾದಿಯಾಗಿದೆ. ದೇಶದ ಮುಂದಿನ ಪ್ರಜೆಗಳಾದ ಯುವ ಮತದಾರರು ಜಾವಾಬ್ದಾರಿಯಿಂದ ತಪ್ಪದೇ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಬೇಕು ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಮಾತನಾಡಿ, ದೇಶದಲ್ಲಿ 2011 ರಿಂದ ರಾಷ್ಟೀಯ ಮತದಾರರ ದಿನಾಚರಣೆನ್ನು ಆಚರಿಸಿಕೊಂಡು ಬರುತ್ತಿದೆ. ಜಿಲ್ಲೆಯು 6 ವಿಧಾನಸಭೆ ಕ್ಷೇತ್ರ ಮತ್ತು ಒಂದು ಲೋಕಸಭೆ ಕ್ಷೇತ್ರವನ್ನು ಒಳಗೊಂಡಿದ್ದು, ಪ್ರತಿ ವರ್ಷ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 12.22 ಲಕ್ಷ ಮತದಾರರಿದ್ದಾರೆ.
ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು ಈ ಬಾರಿ 10 ಹೊಸ ಮತದಾನ ಕೇಂದ್ರಗಳನ್ನು ತೆರಯಲಾಗಿದ್ದು, ಈ ವರ್ಷ 7,942 ಹೊಸ ಮತದಾರರು ನೋಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ. ಜಿಲ್ಲೆಯಿಂದ ಮಾಸ್ಟರ್ ಟ್ರೆನರ್ ದಿನೇಶ ಶೇಟ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಮಾಸ್ಟರ್ ಟ್ರೆನರ್ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷÀಯವಾಗಿದೆ ಎಂದರು.
ಪ್ರತಿಯೋಬ್ಬ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ಯಾವುದೇ ಅಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಜಗತ್ತಿನ ಬೃಹತ್ ಪ್ರಜಾ ಪ್ರಭುತ್ವನ್ನು ಯಶಸ್ವಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರ ಕಾಂದೂ, ಉಪವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಶಿಕ್ಷಕಿ ವನಿತಾ ಶೇಟ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
Kshetra Samachara
25/01/2025 07:25 pm