ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೆರೆ ಸಂತ್ರಸ್ತರ ಮನೆಗಳಿಗೆ ಶಾಸಕ ರಘುಪತಿ ಭಟ್ ಭೇಟಿ: ಗರಿಷ್ಠ ಪರಿಹಾರ ನೀಡುವಂತೆ ಸೂಚನೆ

ಉಡುಪಿ: ಉಡುಪಿ ನಗರದ ಸಗ್ರಿ ವಾರ್ಡ್ ನಿವಾಸಿ ವಿಠಲ ಮೂಲ್ಯ ಎಂಬವರ ಮನೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಸಿದು ಬಿದ್ದಿದ್ದು, ಇವರ ಮನೆಗೆ ಶಾಸಕ ರಘುಪತಿ ಭಟ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ಧನ ನೀಡುವಂತೆ ಸೂಚನೆ ನೀಡಿದರು.

ಕಲ್ಯಾಣಪುರ ಗ್ರಾ ಪಂ ವ್ಯಾಪ್ತಿಯ ಕಡುವಿನ ಬಾಗಿಲು ಭಾಗದ ನೆರೆ ಪೀಡಿತ ಪ್ರದೇಶಕ್ಕೂ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

ಇದಲ್ಲದೆ, ನೆರೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಗೀಡಾದ ಮನೆಗಳಿಗೆ ಮತ್ತು ಅಂಗಡಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಶಾಸಕರು ಸೂಚನೆ ನೀಡಿದರು.

Edited By : Vijay Kumar
Kshetra Samachara

Kshetra Samachara

21/09/2020 11:43 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ