ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ದೂಪದ ಕಟ್ಟೆಯ ಬಳಿ ದನದ ತ್ಯಾಜ್ಯ ಮತ್ತು ಮಾಂಸವನ್ನು ರಸ್ತೆಯಲ್ಲೇ ಎಸೆದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಹಸುವಿನ ಮಾಂಸ ಮಾಡಿದ ನಂತರ ತ್ಯಾಜ್ಯವನ್ನು ಚೀಲದಲ್ಲಿ ಕಟ್ಟಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ತ್ಯಾಜ್ಯವು ದನದ ತಲೆಬಾಗ ಹಾಗೂ ಹೊಟ್ಟೆಯ ಒಳ ಭಾಗವನ್ನು ಒಳಗೊಂಡಿದೆ.
ಜನ ಓಡಾಡುವ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಚೀಲದೊಳಗೆ ತ್ಯಾಜ್ಯ ಎಸೆಯಲಾಗಿದ್ದು ದುರ್ನಾತ ಬೀರುತ್ತಿದೆ. ಒಂದು ವಾರದ ಹಿಂದೆಯೂ ಇದೇ ಸ್ಥಳದಲ್ಲಿ ಗೋವಿನ ತ್ಯಾಜ್ಯ ಏಸೆಯಲಾಗಿದ್ದು, ಪಂಚಾಯತ್ ವತಿಯಿಂದ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆ ಸ್ಥಳವನ್ನು ಶುಚಿಗೊಳಿಸಿದ ಬಳಿಕ ಅದೇ ಸ್ಥಳದಲ್ಲಿ ಮತ್ತೆ ಅದೇ ರೀತಿ ಗೋವಿನ ತ್ಯಾಜ್ಯ ಎಸೆಯಲಾಗಿದೆ.
ಗಲಭೆ ಸೃಷ್ಟಿಸುವ ಉದ್ದೇಶದಿಂದ ಹಸುವಿನ ತ್ಯಾಜ್ಯವನ್ನು ಉದ್ದೇಶಪೂರ್ವಕ ಎಸೆಯಲಾಗಿದೆ ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ.
PublicNext
09/12/2024 08:26 pm