ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಮಸ್ಯೆಗೆ ಯುಯುಸಿಎಂಎಸ್‌ ಕಾರಣ - ಹಾಲ್ ಟಿಕೆಟ್ ನೀಡದ ಆರೋಪಕ್ಕೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ

ಮಂಗಳೂರು: ಪರೀಕ್ಷಾ ಶುಲ್ಕ ಪಾವತಿಸಿದರೂ ಹಾಲ್ ಟಿಕೆಟ್ ಕೊಟ್ಟಿಲ್ಲ ಎಂಬ ವಿದ್ಯಾರ್ಥಿಗಳ ಆರೋಪಕ್ಕೆ ಪಿ.ಎ.ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಈ ಸಮಸ್ಯೆಗೆ ಕಾರಣರು ನಾವಲ್ಲ, ಯುಯುಸಿಎಂಎಸ್. ಆದರೆ, ಸದ್ಯ ಸಮಸ್ಯೆ ಬಗೆಹರಿದಿದ್ದು, ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಬಂದಿದೆ ಎಂದು ಹೇಳಿದೆ.

ಪಿ.ಎ.ಕಾಲೇಜು ಪ್ರಾಂಶುಪಾಲ ಡಾ.ಸರ್ಫ್ರಾಜ್ ಜೆ. ಹಾಶಿಂ ಮಾತನಾಡಿ, ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳು ಕಾಲೇಜಿಗೆ ಅಥವಾ ಮಂಗಳೂರು ವಿವಿಗೆ ಪಾವತಿ ಮಾಡುವುದಲ್ಲ. ಬದಲಾಗಿ ನೇರವಾಗಿ ಯುಯುಸಿಎಂಎಸ್‌ಗೆ ಪಾವತಿ ಮಾಡುತ್ತಾರೆ. ಹೀಗೆ ಪಾವತಿ ಮಾಡಿದ 27ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಬಳಿಕ ಸಕ್ಸಸ್ ಎಂದು ಬಾರದೆ ಇನೀಶಿಯೇಟೆಡ್ ಎಂದು ಬಂದಿದೆ‌. ಈ ಬಗ್ಗೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪರವಾಗಿ ನಾವೂ ಮಾತನಾಡಿದ್ದೇವೆ. ಆದರೆ, ಯುಯುಸಿಎಂಎಸ್ ನಿರ್ದೇಶನದಂತೆ ವಿದ್ಯಾರ್ಥಿಗಳು ಮತ್ತೆ ಪರೀಕ್ಷಾ ಶುಲ್ಕ ವಿಧಿಸುವಂತೆ ಹೇಳಿದೆ. ಇದನ್ನು ನಾವು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಅವರಲ್ಲಿ ಓರ್ವ ಶುಲ್ಕ ಮರುಪಾವತಿ ಮಾಡಿದ್ದು, ಉಳಿದ 26 ಮಂದಿ ಶುಲ್ಕ ಪಾವತಿಸಲು ತಯಾರಿರಲಿಲ್ಲ ಎಂದರು.

ಆದರೂ ಶತಾಯಗತಾಯ ಪ್ರಯತ್ನದ ಬಳಿಕ ವಿವಿಯ ಆದೇಶದಂತೆ ಆನ್‌ಲೈನ್ ಅಲ್ಲ, ಆಫ್‌ಲೈನ್‌ನಲ್ಲೂ ಪಾವತಿ ಮಾಡಬಹುದು ಎಂದು ಹೇಳಿದೆ. ಅದರಂತೆ ಶನಿವಾರವೇ ಸಮಸ್ಯೆ ಬಗೆಹರಿದಿದೆ. ರವಿವಾರ ಮಧ್ಯಾಹ್ನ 1.06ರ ಹೊತ್ತಿಗೆ ಹಾಲ್‌ ಟಿಕೆಟ್ ಪೋರ್ಟಲ್‌ನಲ್ಲಿ ದೊರಕಲಾರಂಭಿಸಿದೆ. ಆದರೂ ಸೋಮವಾರ ವಿದ್ಯಾರ್ಥಿಗಳು ಈ ಬಗ್ಗೆ ಕಾಲೇಜು ಮೇಲೆ ಆರೋಪಿಸಿ ಸುದ್ಧಿಗೋಷ್ಠಿ ನಡೆಸಿದ್ದಾರೆ. ಆದರೆ, ಈ ಸಮಸ್ಯೆಗೆ ಕಾಲೇಜು ಆಡಳಿತ ಮಂಡಳಿ ಕಾರಣವೇ ಅಲ್ಲ‌ ಎಂದು ಹೇಳಿದ್ದಾರೆ.

Edited By : Nagesh Gaonkar
PublicNext

PublicNext

11/12/2024 04:21 pm

Cinque Terre

10.52 K

Cinque Terre

0

ಸಂಬಂಧಿತ ಸುದ್ದಿ