ಕಾರ್ಕಳ: ಸಿಡಿಲು ಬಡಿದು ವಿದ್ಯಾರ್ಥಿನಿಯೋರ್ವಳು ಗಾಯಗೊಂಡ ಘಟನೆ ನಿನ್ನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಎಂಬಲ್ಲಿ ಸಂಭವಿಸಿದೆ.
ಕಾರ್ಕಳ ನಗರದ ಪತ್ತೊಂಜಿಕಟ್ಟೆ ನಿವಾಸಿ ಸುರೇಶ್ ಪೂಜಾರಿ ಎಂಬವರ ಪುತ್ರಿ, ಶ್ರೀ ಭುವನೇಂದ್ರ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಚೈತನ್ಯ ಸಿಡಿಲಘಾತವಾಗಿ ಅಸ್ವಸ್ಥಗೊಂಡಿದ್ದಾರೆ.
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೈತನ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರದೀಪ್, ಕಂದಾಯ ನಿರೀಕ್ಷಕ ಶಿವಪ್ರಸಾದ್, ಪುರಸಭಾ ಸದಸ್ಯೆ ನೀತಾ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಪ್ರವೀಣ್ ಭೇಟಿ ನೀಡಿದ್ದಾರೆ.
Kshetra Samachara
09/12/2024 10:50 am