ಬೈಂದೂರು: ಹೆಮ್ಮಾಡಿ ಕನ್ನಡ ಕುದ್ರು ವಿನಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆ! ನಿವಾಸಿಗಳು ಆತಂಕ.
ಬೈಂದೂರು: ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕನ್ನಡ ಕುದ್ರು ಎಂಬಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ನಿವಾಸಿಗಳ ಆತಂಕ ಹೆಚ್ಚಾಗಿದೆ.
ಸುತ್ತಲು ಸೌಪರ್ಣಿಕ ನದಿಯ ನೀರಿನ ಮಧ್ಯಭಾಗದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ಗಂಗೊಳ್ಳಿ ಭಾಗದ ಮೀನುಗಾರರು ಹೊಳೆಯಲ್ಲಿ ರಾತ್ರಿ ವೇಳೆಯಲ್ಲಿ ಮೀನು ಹಿಡಿಯುವ ಸಂದರ್ಭ ಚಿರತೆ ಕಾಣಿಸಿಕೊಂಡಿದೆ, ಹಾಗೂ ಸ್ಥಳೀಯ ನಿವಾಸಿಗಳಿಗೂ ಸೆಂಟ್ ಆಂಥೋನಿ ದೇವಾಲಯದ ಭಾಗದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ, ನಿವಾಸಿಗಳ ನಿದ್ರೆ ಕೆಡಿಸಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಚಿರತೆ ಹಿಡಿಯಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ, ಹಾಗೂ ಇಂದು ಆದಿತ್ಯವಾರ ರಾತ್ರಿ ವೇಳೆ ಹಿರಿಯ ಅಧಿಕಾರಿಗಳು ಭೇಟಿ ನೀಡುವ ಮಾಹಿತಿ ಲಭ್ಯವಾಗಿದೆ.
Kshetra Samachara
08/12/2024 10:39 am