ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಅನಾಥ ಗೋವುಗಳಿಗೆ ಮೇವು ನೀಡಿದ ಬಂಡೀಮಠದ ಯುವಜನತೆ

ಬ್ರಹ್ಮಾವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಯೇ ಫ್ರೆಂಡ್ಸ್ ಬಂಡೀಮಠ ಇದರ ಸದಸ್ಯರು ಇಲ್ಲಿನ ಪರಿಸರದ ರೈತರಿಂದ ಒಣ ಹುಲ್ಲನ್ನು ಸಂಗ್ರಹಿಸಿ ಪರಿಸರದ ಅನಾಥ ಗೋಶಾಲೆಗೆ ನೀಡುವ ಪುಣ್ಯ ಕಾರ್ಯವನ್ನು ಭಾನುವಾರದ ರಜಾದಿನದಂದು ಮಾಡಿ ಮಾದರಿಯಾಗಿದ್ದಾರೆ.

ಊರಿನ ಯುವಕರು ಕಳೆದ ಕೆಲವುದಿನದಿಂದ ಒಣಹುಲ್ಲು ನೀಡುವ ಕುರಿತು ಪ್ರತಿ ಮನೆಗೆ ತೆರಳಿ ಅರಿವು ಮೂಡಿಸಿದ ಫಲವಾಗಿ ಹಲವಾರು ಮಂದಿ ತಾವು ಬೆಳೆದ ಭತ್ತದ ಒಣಹುಲ್ಲನ್ನು ಸ್ವಯಂ ಸ್ಫೂರ್ತಿಯಿಂದ ನೀಡಿದ ಕಾರಣ ಭಾನುವಾರ 7 ಟೆಂಪೋದಲ್ಲಿ ಒಣಹುಲ್ಲನ್ನು ಸಂಗ್ರಹಿಸಿ ನೀಲಾವರ, ಆರೂರು, ಕೂರಾಡಿ, ಮತ್ತು ನಂಚಾರು ಹೀಗೆ 4 ಅನಾಥ ಗೋಶಾಲೆಗೆ ರವಾನಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಗೋವಿಗಾಗಿ ಮೇವು ವಿನೂಥನ ಕಲ್ಪನೆಯ ರೂವಾರಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಈ ಸಂದರ್ಬ ಆಗಮಿಸಿ ಬಂಡೀಮಠದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಪ್ರತಿ ಊರಿನ ಯುವಕರು ಯುವತಿಯರು ಸ್ವಯಂ ಸೇವಾ ಸಂಘ ಸಂಸ್ಥೆಯವರು ಇಂತಹ ಕಾರ್ಯಮಾಡಿ ಅನಾಥ ಗೋವುಗಳ ರಕ್ಷಣೆಗೆ ಸಹಕರಿಸ ಬೇಕಾಗಿದೆ ಎಂದರು.

ಗಣಪತಿ ನಾಯ್ಕ್, ಸುಬ್ರಹ್ಮಣ್ಯ ಪೂಜಾರಿ,ಅಶೋಕ್ ಆಚಾರ್ಯ, ನಿತಿನ್ ಕುಲಾಲ್, ಸಂತೋಷ ಶೆಟ್ಟಿ ರಾಕೇಶ್ ನಾಯ್ಕ್, ಯೋಗೀಶ್ ಪೂಜಾರಿ ಇನ್ನಿತರು ಹಾಜರಿದ್ದರು.

Edited By : Suman K
PublicNext

PublicNext

09/12/2024 01:46 pm

Cinque Terre

25.61 K

Cinque Terre

1

ಸಂಬಂಧಿತ ಸುದ್ದಿ