ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸರಕಾರಿ ಶಾಲೆ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ

ಬ್ರಹ್ಮಾವರ: ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಡಾ. ಎಚ್. ಎಸ್. ಶೆಟ್ಟಿ ಇವರಿಂದ ಬ್ರಹ್ಮಾವರ ಭಾಗದ ಬಡ ಜನರಿಗೆ ಉಪಯುಕ್ತವಾಗುವಂತೆ ಕಾಋಯ ಕೈಗೊಂಡಿದ್ದಾರೆ. 3 ಕೋಟಿ ಕೊಡುಗೆ ನೀಡುವ ಮೂಲಕ ನೂತನವಾಗಿ 2 ಮಹಡಿ ನಿರ್ಮಿಸಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ ಮಾಡಲಾಗಿದೆ. ಡಿಸೆಂಬರ್ 12 ರಂದು ಗಣ್ಯರ ಉಪಸ್ಥಿತಿಯಲ್ಲಿ ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ ಎಂದು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರವೀಂದ್ರ ಉಪಾಧ್ಯಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಸರು ಮಾತ್ರ ಬದಲಾವಣೆ ಹೊರತು ಇದು ಯಾವುದೇ ಕಾರಣದಿಂದ ಖಾಸಗೀಕರಣವಾಗುತ್ತದೆ ಎನ್ನುವ ಅಪನಂಬಿಕೆ ಯಾರಿಗೂ ಬೇಡ. ಶಾಲಾ ಶಿಕ್ಷಕರಾಗಿದ್ದವರ ಹೆಸರಿನಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಬೆಳೆಸುವ ಉದ್ದೇಶ ಇದಾಗಿದೆ ಎಂದರು. ಹೊಸ ಕಟ್ಟಡ ಮತ್ತು ಸಭಾ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಶಿಕ್ಷಣ ತಜ್ಞರಾದ ಡಾ.ಗುರುರಾಜ ಖರ್ಜಗಿ, ಉದ್ಘಾಟಿಸಲಿದ್ದು ನಾನಾ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು. ಸಂಸ್ಥೆಯ ಉಪಾಧ್ಯಕ್ಷ ಹಾಲಾಡಿ ನಾಗರಾಜ್ ಶೆಟ್ಟಿ, ಗಣ್ಯರಾದ ಪಂಚಮಿ ಮೋಹನ್ ಶೆಟ್ಟಿ, ರವಿ ಶೆಟ್ಟಿ ಕುಮ್ರಗೋಡು, ಕೃಷ್ಣ ಪೂಜಾರಿ, ಶಿಕ್ಷಕ ಜಗದೀಶ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By : Suman K
Kshetra Samachara

Kshetra Samachara

11/12/2024 12:48 pm

Cinque Terre

716

Cinque Terre

0

ಸಂಬಂಧಿತ ಸುದ್ದಿ