ನವಲಗುಂದ : ಭಾರತ ಹಳ್ಳಿಗಳಿಂದ ಕೂಡಿದ ದೇಶ ಇಲ್ಲಿ ಕೃಷಿಯೇ ಮೂಲ ಕಸುಬು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಅನೇಕ ಕುಟುಂಬಗಳಿವೆ..
ಆದರೆ ಹವಾಮಾನದ ವೈಪರತ್ಯೆದಿಂದಾಗಿ ಇತ್ತೀಚಿನ ದಿನಗಳಲ್ಲಿ ಅನ್ನದಾತರ ಪಾಡು ತೀರಾ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.. ಸದ್ಯ ಕೃಷಿಕರ ಬಾಳಲ್ಲಿ ಆಶಾಕಿರಣವಾಗುತ್ತಿದೆ ದೇಶಪಾಂಡೆ ಫೌಂಡೇಶನ್.
ಹೌದು ಸ್ವಃತ ಜಮೀನಿದೆ ಎದೆಯಲ್ಲಿ ಉತ್ತಮ ಬೆಳೆ ಬೆಳೆಯಬೇಕು ಎನ್ನುವ ಛಲವಿದೆ ಆದರೆ ಅತಿವೃಷ್ಟಿ ಅನಾವೃಷ್ಟಿಯ ತೂಗುಗತ್ತಿಯ ನಡುವೆ ಅನ್ನದಾತನ ಪಾಡು ದೇವರಿಗೆ ಪ್ರಿಯ ಎನ್ನುವಂತಾಗಿದೆ ಧೋ ಎಂದು ಸುರಿಯುವ ಮಳೆ ಬಾರದಿದ್ದರು ತೊಂದರೆ.
ರೈತರ ಈ ಎಲ್ಲಾ ಅಡೆತಡೆಗಳನ್ನು ಮನಗಂಡ ದೇಶಪಾಂಡೆ ಫೌಂಡೇಶನ್ ಕೃಷಿಗಾಗಿ ವಿಶೇಷ ಒಲವು ತೋರಿ ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ.
ಹೌದು ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ 36 ವರ್ಷದ ರೈತ ರಾಮಪ್ಪ ಮುತ್ತಪ್ಪ ಕೌಜಗೇರಿ ಅವರ ಬದುಕಿನಲ್ಲಿ ಬೆಳಕು ತರುವಲ್ಲಿ ಸಹಕಾರಿಯಾಗಿದೆ ದೇಶಪಾಂಡೆ ಫೌಂಡೇಶನ್. ಈ ಫೌಂಡೇಶನ್ ನಿಂದ ಬದುಕು ಬದಲಾದ ಬಗ್ಗೆ ರೈತ ರಾಮಪ್ಪ ಏನು ಹೇಳಿದ್ದಾರೆ ನೀವೇ ಕೇಳಿ..
ಸ್ವಃತ ಹೊಲವಿದ್ದರೂ ಗಂಗಾ ಮಾತೆಯ ಆಶೀರ್ವಾದವಿಲ್ಲದೆ ಕಂಗೆಟ್ಟಿದ್ದ ರೈತನಿಗೆ ದೇಶಪಾಂಡೆ ಫೌಂಡೇಶನ್ ಕೃಷಿ ಹೊಂಡ ನಿರ್ಮಿಸಿಕೊಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಬರೋಬ್ಬರಿ 10 ಎಕರೆ ಜಮೀನಿ ಇದೆ ಆದರೆ ಈ ಜಮೀನು ಪೂರ್ತಿ ಮಳೆಯಾಧಾರಿತ ಪ್ರದೇಶವಾಗಿದೆ ಮಳೆ ಬಂದಾಗ ಮುಂಗಾರಿನ ಬೆಳೆ ಕಾಣುತ್ತಿದ್ದ ರೈತ ಮರಳಿ ಮಳೆ ಬರುವವರೆಗೂ ಕೈ ಕಟ್ಟಿ ಕುಳಿತುಕೊಳ್ಳಬೇಕಾಗಿತ್ತು.
ಒಂದೊಮ್ಮೆ ಮುಂಗಾರಿನ ಪೈರು ಇನ್ನೇನು ಕೈ ಸೇರುವಷ್ಟರಲ್ಲಿ ವರುಣಾರ್ಭಟಕ್ಕೆ ಕೈ ತಪ್ಪಿ ವರ್ಷದ ಗಂಜಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾದ ಉದಾಹರಣೆಗಳು ಇವೆ.
ರೈತನ ಅತಂತ್ರ ಬದುಕಿಗೆ ಉತ್ಸಾಹ ತುಂಬುವಲ್ಲಿ ದೇಶಪಾಂಡೆ ಫೌಂಡೇಶನ್ ನೆರವಾಗಿದೆ ರೈತನ ಹೊಲದ ಒಂದು ಬದಿಯಲ್ಲಿ 120 ಅಗಲ 120 ಉದ್ದ 12 ಆಳ (120*120*12) ಅಳತೆಯ ಕೃಷಿ ಹೊಂಡವನ್ನು ನಿರ್ಮಿಸಿಕೊಟ್ಟಿದೆ.
ಇದರಿಂದ ರೈತ ಬೆಸಿಗೆಯಲ್ಲಿಯೂ ಉತ್ತಮ ಬೆಳೆ ಬೆಳೆಯುತ್ತಿದ್ದಾನೆ ಈ ಮೊದಲು ಒಣ ಬೇಸಾಯದಲ್ಲಿ ಮುಂಗಾರು ಬೆಳೆಯಾಗಿ ಹೆಸರು,ಮೆಕ್ಕೆಜೋಳ ಬೆಳೆದು ವರ್ಷಕ್ಕೆ 1.5 ಲಕ್ಷ ಆದಾಯ ಗಳಿಸುತ್ತಿದ್ದ ರೈತ ರಾಮಪ್ಪ ಈಗ ಕೃಷಿ ಹೊಂಡದ ನೆರವಿನಿಂದ ವಾಣಿಜ್ಯ ಬೆಳೆ ಹತ್ತಿ,ಗೋಧಿ,ಹೆಸರು, ಈರುಳ್ಳಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಮೂಲಕ ವಾರ್ಷಿಕ 4 ಲಕ್ಷ ಆದಾಯ ಗಳಿಸುತ್ತಿದ್ದಾನೆ.
ಕೃಷಿ ಹೊಂಡ ನಿರ್ಮಾಣದ ಪೂರ್ವ ಮತ್ತು ನಿರ್ಮಾಣದ ಬಳಿಕ ರೈತನೊಬ್ಬನ ಬದುಕು ಬದಲಾದ ಪರಿ ನಿಜಕ್ಕೂ ಮಾದರಿ..
Kshetra Samachara
26/01/2021 09:36 pm