ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಆನೆ ಹಾವಳಿ ತಡೆಗಟ್ಟಲು ಆಗಿಲ್ಲ ಅಂದ್ರೆ ಆನೆ ಕೊಲ್ಲಲು ನಮಗಾದ್ರು ಅವಕಾಶ ಕೊಡಿ - ಹರೀಶ್ ಪೂಂಜಾ

ಬೆಳಗಾವಿ: ಆನೆ ಹಾವಳಿ ತಡೆಗಟ್ಟಲು ಆಗಿಲ್ಲ ಅಂದರೆ ಆನೆ ಕೊಲ್ಲಲು ನಮಗಾದ್ರು ಅವಕಾಶ ಕೊಡಿ ಎಂದು ಸದನದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ.

ಆನೆಗಳ ಹಾವಳಿ ವಿಪರೀತ ಆಗಿದೆ. ಸೌರಶಕ್ತಿ ಆಧಾರದಲ್ಲಿ ಬೇಲಿ ರಚನೆ ಮಾಡಿದ್ದೇವೆ. ನಾನು ನನ್ನ ಕ್ಷೇತ್ರದ ಬಗ್ಗೆ ಮಾತಾಡ್ತಿದ್ದೇನೆ, ಅರಣ್ಯ ಇಲಾಖೆಯ ವಿದ್ಯುತ್ ತಂತಿ ಬೇಲಿಯಿಂದ 26 ಆನೆಗಳು ಸತ್ತು ಹೋಗಿವೆ ಗ್ರಾಮೀಣ ಪ್ರದೇಶದ ಜನರು ಆನೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಸ್ಪಂದನೆ ಕೊಡುತ್ತಿಲ್ಲ . ಪರಿಹಾರ ಆಗಲ್ಲ ಅಂದರೆ ರೈತರಿಗೆ ಕೊಲ್ಲಲು ಅವಕಾಶ ಕೊಡಿ ಎಂದರು.

ಪಶ್ಚಿಮ ಘಟ್ಟದ ಜನರು ತತ್ತರಿಸಿ ಹೋಗಿದ್ದಾರೆ, ಗ್ರಾಮೀಣ ಪ್ರದೇಶದ ಜನರು ನೆಮ್ಮದಿ ಯಿಂದ ಇರೋಕೆ ಸಾಧ್ಯವಿಲ್ಲ ಇದಕ್ಕೆ ಶಾಶ್ವತವಾದ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದರು ಶಾಸಕರು ಜವಬ್ದಾರಿ ಯುತ ಸ್ಥಾನದಲ್ಲಿ ಇದ್ದಾರೆ ವನ್ಯಜೀವಿ ಕೊಲ್ಲುವ ಮಾತು ಅತ್ಯಂತ ದುರದೃಷ್ಟಕರ ಸಂಗತಿ ಎಂದರು ಈ ವೇಳೆ ಮನುಷ್ಯರಿಗೆ ಜೀವನ ಮಾಡಲು ಎಷ್ಟು ಹಕ್ಕು ಇದೆಯೋ ಹಾಗೇ ಪ್ರಾಣಿಗಳಿಗೂ ಅಷ್ಟೇ ಹಕ್ಕಿದೆ ಎಂದ ಸ್ಪೀಕರ್. ಆನೆ ಹಿಮ್ಮೆಟ್ಟಿಸೋದು ಸರಳವಾದ ಮಾತಲ್ಲ ಆನೆ ಓಡಿಸುವ ಕೆಲಸ ಕಾರ್ಯ ಸಿಬ್ಬಂದಿ ಗಳಿಂದ ಸಮರ್ಥವಾಗಿ ನಡೀತ್ತಿದೆ ಆದ್ರೆ ಕೊಲ್ಲಲು ಅನುಮತಿ ನೀಡಿ ಎಂಬುದು ಸರಿಯಲ್ಲ ಎಂದರು.

ರಾಜ್ಯ ಸರ್ಕಾರ ಆನೆಗಳ ಹಾವಳಿ ತಡೆಗೆ ಕಳೆದ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, 284.82 ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗುತ್ತಿದೆ, ಜೊತೆಗೆ ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

Edited By : Manjunath H D
PublicNext

PublicNext

12/12/2024 10:36 pm

Cinque Terre

8.65 K

Cinque Terre

3

ಸಂಬಂಧಿತ ಸುದ್ದಿ