ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳ ವಿರುದ್ಧ ಸದನದಲ್ಲಿ ಯತ್ನಾಳ್ ವಾಗ್ದಾಳಿ

ಬೆಳಗಾವಿ ಅಧಿವೇಶನದ 3ನೇ ದಿನ ಸದನ ಸಂಪೂರ್ಣವಾಗಿ ಪಂಚಮಸಾಲಿ ಲಾಠಿ ಚಾರ್ಜ್ ವಿಚಾರದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯ್ತು. ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಗೆ ಆದೇಶ ಮಾಡಿದ ವಿಡಿಯೋ ನನ್ನ ಬಳಿ ಇದೆ ಎಂದು ಯತ್ನಾಳ್ ಹೇಳಿದರು. ಲಾಠಿ ಚಾರ್ಜ್ ಮಾಡಬೇಕು ಅಂದ್ರೆ ಒಂದು ಗೈಡ್ ಲೈನ್ಸ್ ಇದೆ. ಆದ್ರೆ, ಅದನ್ನ ಪೊಲೀಸರು ಪಾಲಿಸಲಿಲ್ಲ ಎಂದು ಪೊಲೀಸರ ಕ್ರಮದ ಬಗ್ಗೆ ಸದನದಲ್ಲಿ ಯತ್ನಾಳ್ ವಾಗ್ದಾಳಿ ನಡೆಸಿದರು.

ಎಡಿಜಿಪಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಇವರ ವಿರುದ್ಧ ಮಾನವ ಹಕ್ಕು ಆಯೋಗಕ್ಕೂ ದೂರು ಕೊಡ್ತೀನಿ ಎಂದರು. ಯಾರೂ ಹಿರಿಯ ಅಧಿಕಾರಿಗಳು ಇಲ್ದೇ ಲಾಠಿ ಚಾರ್ಜ್ ಮಾಡಿದ್ದಾರೆ. ಆ ಎಡಿಜಿಪಿ ಅಧಿಕಾರಿಗೆ ಮಾನ ಮರ್ಯಾದೆ ಇದೆಯೇನ್ರೀ? ಯಾರೋ ಫೋನ್ ಮಾಡಿದ್ರು ಅಂತಾ ಬರ್ತಾರಲ್ಲ.ಅಲ್ಲಿ ಹೇಯ್, ಲಾಠಿ ಚಾರ್ಜ್ ಮಾಡಿ ಅಂತಾನೇ. ಇದರ ವೀಡಿಯೋ ನನ್ನ ಬಳಿ ಇದೆ ಎಂದರು.

ಯಾವ ಅಯೋಗ್ಯ ಪಾಕಿಸ್ತಾನ ಜಿಂದಾಬಾದ್ ಕೂಗಿದ್ನೋ, ಇದೇ ಗೃಹ ಮಂತ್ರಿ ಗಳು ಕೂಗಿಲ್ಲ ಅಂದ್ರು. ಈವಾಗ ಪಂಚಮಸಾಲಿ ಹೋರಾಟಗಾರರು ಕಲ್ಲು ಹೊಡೆದ್ರು ಅಂತೀರಾ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ದೇ ಈ ಲಾಠಿ ಚಾರ್ಜ್ ಕುರಿತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯೋದಾಗಿಯೂ ಎಚ್ಚರಿಸಿದರು.

Edited By : Manjunath H D
PublicNext

PublicNext

12/12/2024 10:29 pm

Cinque Terre

8.37 K

Cinque Terre

2

ಸಂಬಂಧಿತ ಸುದ್ದಿ