ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಚ್ಚ ಸರ್ವೇಕ್ಷಣ್ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಶಿವಮೊಗ್ಗಕ್ಕೆ ಪ್ರಥಮ ಸ್ಥಾನ

ಶಿವಮೊಗ್ಗ: ಕೇಂದ್ರ ಸರ್ಕಾರ ದೇಶಾದ್ಯಂತ 2022 ರಲ್ಲಿ ನಡೆಸಿದ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉತ್ತಮ ಶ್ರೇಯಾಂಕ ಪಡೆದಿದ್ದು, ಅ.1 ರಂದು ಬೆಳಗ್ಗೆ 11ಗಂಟೆಗೆ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಪಾಲಿಕೆಯ ವಿವಿಧ ವಿಭಾಗಗಳಲ್ಲಿ ತೋರಿರುವ ಕಾರ್ಯಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಘನತ್ಯಾಜ್ಯ ವಸ್ತು ನಿರ್ವಹಣೆ -2016 ರ ನಿಯಮದಂತೆ ಕೆಲವು ವಿನೂತನ, ನವೀನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ವಿಲೇ ಮಾಡಿರುವುದರಿಂದ ಈ ಪ್ರಶಸ್ತಿ ಲಭಿಸಿದೆ ಎಂದರು.

ಈ ಪ್ರಶಸ್ತಿ ದೇಶದ 12 ಮಹಾನಗರ ಪಾಲಿಕೆಗಳಿಗೆ ಲಭಿಸಿದ್ದು, ಶಿವಮೊಗ್ಗ ಎಷ್ಟನೇ ಸ್ಥಾನ ಪಡೆದಿದೆ ಎಂಬುದು ಅಂದು ಘೋಷಣೆಯಾಗಲಿದೆ. ಸೆ. 20 ಮತ್ತು 30 ರಂದು ಎರಡು ದಿನಗಳ ಪ್ರಶಸ್ತಿ ಪಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಕಾಲ ಸೆಮಿನಾರ್ ನಡೆಯಲಿದೆ ಎಂದರು. ಪಾಲಿಕೆ ವತಿಯಿಂದ ಬಯೋ ಮೇಥನೇಷನ್ ಘಟಕ ಕಾರ್ಯಾರಂಭ ಮಾಡಿರುವುದು.

ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಹಸಿ ಮತ್ತು ಒಣ ಕಸ ವಿಂಗಡಿಸಲು ಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 84,300 ಮನೆಗಳಿಗೆ ಡಸ್ಟ್ ಬಿನ್ ವಿತರಣೆ ಮಾಡಿರುವುದು, ಘನತ್ಯಾಜ್ಯ ಸಂಗ್ರಹಿಸಿ ಸಾಗಾಣಿಕೆ ಮಾಡಲು ಈ ವರ್ಷ ಹೊಸ ವಾಹನಗಳ ಖರೀದಿ, ಪಾರಂಪರಿಕ ತ್ಯಾಜ್ಯ ವಿಲೇವಾರಿ, ಬಯಲುಶೌಚ ಮುಕ್ತ, ಕಟ್ಟಡಗಳ ಭಗ್ನಾವಶೇಷ ತ್ಯಾಜ್ಯ ಸಂರಕ್ಷಿಸಲು ವಿಶೇಷ ಯೋಜನೆ, ದ್ರವ ತ್ಯಾಜ್ಯ ನಿರ್ವಹಣೆ, ಹಲವಾರು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಸುಂದರ ನಗರವನ್ನಾಗಿಸಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದರು.

ಕೇಂದ್ರ ಸರ್ಕಾರ ಕಳೆದ 9 ವರ್ಷದಿಂದ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತಿದ್ದು, ರಾಜ್ಯದ 280 ಸ್ಥಳೀಯ ಸಂಸ್ಥೆಗಳಲ್ಲಿ ಫೆಬ್ರವರಿಯಿಂದ ಮೇ ಅಂತ್ಯದವರೆಗೆ ಸರ್ವೇಕ್ಷಣೆ ನಡೆಸಿದೆ. ಇದರಲ್ಲಿ ಶಿವಮೊಗ್ಗ ಪಾಲಿಕೆ ಸಹ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಶೇಷವಾಗಿ 10 ಕೋಟಿ ರೂ. ಅನುದಾನ ಸಿಗಲಿದೆ ಎಂದರು.

Edited By : Abhishek Kamoji
Kshetra Samachara

Kshetra Samachara

28/09/2022 05:50 pm

Cinque Terre

860

Cinque Terre

0

ಸಂಬಂಧಿತ ಸುದ್ದಿ