ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಕಿ….! ಅಣಕು ಪ್ರದರ್ಶನ

ಶಿವಮೊಗ್ಗ : ಸೋಗಾನೆ ವಿಮಾನ ನಿಲ್ದಾಣದಲ್ಲಿಂದು ರಕ್ಷಣ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದ ರಕ್ಷಣಾ ಕಾರ್ಯಗಳ ಅಣಕು ಪ್ರದರ್ಶನ ಮಾಡಿ ಗಮನ ಸೆಳೆದರು. ಇಂದು ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡದ ಅಣಕು ಪ್ರದರ್ಶನ ನಡೆಸಿದ ರಕ್ಷಣಾ ತಂಡ, ವಿಮಾನವೊಂದು ಅಪಘಾತಕ್ಕೀಡಾದ ಸಂದರ್ಭ ಸೃಷ್ಟಿಸಿ ಎಟಿಸಿ, ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ತುರ್ತಾಗಿ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವುದು, ಆರೋಗ್ಯ ಇಲಾಖೆ ಸಿಬ್ಬಂದಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಅಣಕು ಪ್ರದರ್ಶನ ಮಾಡಲಾಯಿತು.

ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಕೆಎಸ್‌ಎಸ್‌ಐಡಿಸಿ, ಭದ್ರತಾ ಉಸ್ತುವಾರಿ ಹೊತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ಟಾರ್‌ ಏರ್‌, ಸ್ಪೈಸ್‌ ಜೆಟ್‌ ಮತ್ತು ಇಂಡಿಗೋ ವಿಮಾನಯಾನ ಸಿಬ್ಬಂದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಎಲ್ಲಾ ವಿಮಾನ ನಿಲ್ದಾಣದಲ್ಲಿ ವರ್ಷಕ್ಕೊಮ್ಮೆ ಇಂತಹ ಅಣಕು ಪ್ರದರ್ಶನ ಮಾಡಬೇಕು ಎಂಬ ನಿಯಮವಿದೆ. ಅಣಕು ಪ್ರದರ್ಶನದ ವರದಿಯನ್ನು ನಾಗರಿಕ ವಿಮಾಯಾನ ಪ್ರಾಧಿಕಾರಕ್ಕೆ-ಡಿಜಿಸಿಎಗೆ ವರದಿ ಸಲ್ಲಿಸಲಾಗುತ್ತದೆ.

Edited By : Nagesh Gaonkar
PublicNext

PublicNext

09/12/2024 08:47 pm

Cinque Terre

24.28 K

Cinque Terre

0

ಸಂಬಂಧಿತ ಸುದ್ದಿ