ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ದಾರಿಮಧ್ಯೆ ಮಂಗಗಳ ಕೀಟಲೆ, ಜಗಳ - ವಾಹನ ಸವಾರರಿಗೆ ಅಡೆತಡೆ

ಸಾಗರ : ನಡುರಸ್ತೆಯಲ್ಲಿ ಮಂಗಗಳ ಗುಂಪು ಪರಸ್ಪರ ಕೀಟಲೆ, ಜಗಳ ಮಾಡಿಕೊಂಡು ವಾಹನ ಸವಾರರಿಗೆ ಅಡ್ಡಿಪಡಿಸಿ ಸಂಚಾರ ಸ್ಥಗಿತಗೊಂಡ ಪ್ರಸಂಗವೊಂದು ಕಂಡುಬಂದಿದೆ. ಈ ಘಟನೆ ಜೋಗ ಜಲಪಾತ ಆಸುಪಾಸಿನ ರಸ್ತೆಯಲ್ಲಿ ನಡೆದಿದೆ.

ಈ ದೃಶ್ಯವನ್ನು ಸ್ಥಳಿಯರೊಬ್ಬರು ಮೋಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದು , ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಎರಡು ಗುಂಪುಗಳಾಗಿ ಡಿವೈಡ್‌ ಆದಂತೆ ಕಾಣುತ್ತಿರುವ ವಾನರ ಪಡೆ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ

ದೃಶ್ಯ ಕಾಣಬಹುದು.

ಕೆಲಹೊತ್ತು ನಡೆದ ಫೈಟ್‌ನ ಮಧ್ಯೆ ವಾಹನ ಸವಾರರು ಸಹ ಪರದಾಡಬೇಕಾಯ್ತು. ಇದರಿಂದಾಗಿ ರಸ್ತೆಯಲ್ಲಿ ಸುಮಾರು ಅರ್ಧಗಂಟೆ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದ್ದಂತು ಸುಳ್ಳಲ್ಲ....

ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ )

Edited By : Nagesh Gaonkar
PublicNext

PublicNext

11/12/2024 06:36 pm

Cinque Terre

18.21 K

Cinque Terre

1