ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ರೋಲ್ಸ್ ರಾಯ್ ಕಾರ್‌ನಲ್ಲಿ ಶಿವಮೊಗ್ಗಕ್ಕೆ ಬರಲಿದೆ 10 ಕೋಟಿ ರೂ. ಶ್ವಾನ

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಆಚರಿಸಲಾಗುತ್ತಿರುವ ಶಿವಮೊಗ್ಗ ದಸರಾ ಅಂಗವಾಗಿ ಸೆ. 27, 29 ಹಾಗೂ ಅ. 2 ರಂದು ವಿಶೇಷ ರೀತಿಯಲ್ಲಿ ರೈತ ದಸರಾ ಆಚರಿಸಲಾಗುವುದು ಎಂದು ರೈತ ದಸರಾ ಸಮಿತಿ ಸದಸ್ಯ ಹೆಚ್.ಸಿ. ಯೋಗೀಶ್ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿನಲ್ಲಿಮಾತನಾಡಿ, ಸೆ. 27 ರಂದು ಬೆಳಗ್ಗೆ 9.30 ಕ್ಕೆ ಮಲವಗೊಪ್ಪದಲ್ಲಿ ಕೆಸರುಗದ್ದೆ ಓಟ ಮತ್ತು ಹಗ್ಗ ಜಗ್ಗಾಟದ ಸ್ಪರ್ಧೆ ನಡೆಯಲಿದ್ದು, ಮೇಯರ್ ಸುನಿತಾ ಅಣ್ಣಪ್ಪ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಎನ್.ಡಿ.ವಿ. ಹಾಸ್ಟೆಲ್ ಆವರಣದಲ್ಲಿ ಶಿಮುಲ್, ಪಶುಸಂಗೋಪನಾ ಇಲಾಖೆ ಸಹಯೋಗದೊಂದಿಗೆ ಆರೋಗ್ಯವಂತ ಹಸು ಪ್ರದರ್ಶನ ಹಾಗೂ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಉದ್ಘಾಟಿಸಲಿದ್ದಾರೆ.

ಅ. 2 ರಂದು ಗಾಂಧಿ ಪಾರ್ಕ್ ನಲ್ಲಿ ನಡೆಯುವ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪ್ರಖ್ಯಾತ ಅಂತರಾಷ್ಟ್ರೀಯ ಶ್ವಾನ ತಳಿಯ ಸಂಶೋಧಕ ಸತೀಶ್ ಕಾಡಬೋಮ್ಸ್ ಆಗಮಿಸಲಿದ್ದಾರೆ. ಶ್ವಾನ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿ 10 ಕೋಟಿ ರೂ. ಮೌಲ್ಯ ಟಿಬೆಟಿಯನ್ ಮಸ್ತೀಫ್ ಶ್ವಾನ ಆಗಮಿಸಲಿದೆ.

ಸುಮಾರು 6 ಕೋಟಿ ರೂ. ವೆಚ್ಚ ರೋಲ್ಸ್ ರಾಯ್ ಕಾರ್‌ನಲ್ಲಿ ಬೆಂಗಳೂರಿನಿಂದ ಆಗಮಿಸುವ ಶ್ವಾನ ಪ್ರದರ್ಶನದಲ್ಲಿ ಒಂದು ಗಂಟೆ ಮಾತ್ರ ಮುಖ್ಯ ಅತಿಥಿಯಾಗಿರುತ್ತದೆ. ರಾಜ್ಯಮಟ್ಟದ ಶ್ವಾನ ಪ್ರದರ್ಶನ ಸ್ಪರ್ಧೆಗೆ 200 ರೂ. ಪ್ರವೇಶ ಶುಲ್ಕವಿದ್ದು, ವೀಕ್ಷಣೆಗೆ ಉಚಿತ ಪ್ರವೇಶವಿದೆ ಎಂದರು.

Edited By : Manjunath H D
PublicNext

PublicNext

26/09/2022 07:00 pm

Cinque Terre

27.56 K

Cinque Terre

0

ಸಂಬಂಧಿತ ಸುದ್ದಿ