ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಮಂಗಳೂರಿನ ಬಸ್ ಜೋಗದಲ್ಲಿ ಅಪಘಾತ - 15ಕ್ಕೂ ಹೆಚ್ಚು ಮಂದಿಗೆ ಗಾಯ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅರಳಗೋಡು ರಸ್ತೆ ತಿರುವಿನಲ್ಲಿ ಮಂಗಳೂರಿನಿಂದ ಜೋಗಕ್ಕೆ ಬಂದಿದ್ದ ಟೂರಿಸ್ಟ್‌ ಬಸ್‌ವೊಂದು ಅಪಘಾತಕ್ಕೀಡಾಗಿದೆ. ಕಾರ್ಗಲ್‌ ಸಮೀಪ ಈ ಘಟನೆ ಸಂಭವಿಸಿದ್ದು. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎನ್ನಲಾಗಿದೆ.

ಇಲ್ಲಿನ ಅರಳಗೋಡು ರಸ್ತೆ ಟರ್ನಿಂಗ್‌ನಲ್ಲಿ ಘಟನೆ ಸಂಭವಿಸಿದೆ. ಬಸ್‌ನಲ್ಲಿ 55 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಟರ್ನಿಂಗ್‌ನಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಕಾರ್ಗಲ್‌ ಹಾಗೂ ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ.

Edited By : Shivu K
PublicNext

PublicNext

15/12/2024 04:30 pm

Cinque Terre

9.08 K

Cinque Terre

0