ಸಾಗರ : ಮಂಗಳೂರಿಂದ ಸಾಗರ ತಾಲೂಕಿನ ದೇವಸ್ಥಾನಗಳಿಗೆ ಪ್ರವಾಸಕ್ಕೆ ಬಂದಿದ ಖಾಸಗಿ ಬಸ್ ಅಪಘಾತ ಸಂಭವಿಸಿದ್ದು 21 ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೊಡು ಸಮೀಪದ ಮುಪ್ಪನೆ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮಂಗಳೂರಿನ ಬಿಸಿ ರೋಡ್ ನಿವಾಸಿಗಳ ತಂಡ ಶನಿವಾರ ರಾತ್ರಿ ಸ್ನೇಹಿತರ ಜೊತೆ ಪ್ರವಾಸ ಕೈಗೊಂಡಿದ್ದು ಇಂದು ಬೆಳಿಗ್ಗೆ ಸಾಗರದ ಜೋಗ ಜಲಪಾತ ವೀಕ್ಷಣೆ ಮಾಡಿಕೊಂಡು ತಾಲೂಕಿನಲ್ಲಿ ಇರುವ ಬಲೆ ಪದ್ಮಾವತಿ ದೇವಸ್ಥಾನ ವೀಕ್ಷಣೆ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ಅರಳಗೊಡು ಸಮೀಪ ಬಸ್. ಅಪಘಾತ ಸಂಭವಿಸಿದ್ದು ಬಸ್ ನಲ್ಲಿ ಇದ್ದ 60 ಮಂದಿ ಪೈಕಿ 21 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ .
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಗೆ ದೌಡಾಯಿಸಿ ಗಾಯಗೊಂಡಿದ್ದ ಪ್ರವಾಸಿಗರಿಗೆ ಚಿಕಿತ್ಸೆ ಕೊಡಿಸಲು ಸಹಕರಿಸಿದ್ದಾರೆ.
PublicNext
15/12/2024 06:20 pm