ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೊರಬ: ಪ್ರತಿಭೆಗಳ ಅನಾವರಣಕ್ಕಾಗಿ 'ಪ್ರತಿಬಿಂಬ'

ಸೊರಬ: ಅಖಿಲ ಹವ್ಯಕ ಮಹಾಸಭಾದ ಸಾಗರ, ಸೊರಬ ವ್ಯಾಪ್ತಿಯಲ್ಲಿ ಪ್ರತಿವರ್ಷದಂತೆ ಹವ್ಯಕರಿಂದ ಹವ್ಯಕರಿಗಾಗಿ ಘೋಷವಾಕ್ಯದ ಪ್ರತಿಬಿಂಬ ಕಾರ್ಯಕ್ರಮ ತಾಲ್ಲೂಕು ನಿಸರಾಣಿ ವಿ.ಸಂ. ಪ್ರೌಢಶಾಲಾ ಆವರಣದಲ್ಲಿ ಜರುಗಿತು.

ಹವ್ಯಕ ಸಮಾಜದಲ್ಲಿನ ಹಿರಿಕಿರಿಯ ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳಿಗಾಗಿ ವಿವಿಧ ಸ್ಪರ್ಧೆಗಳು, ಸಾಧಕರುಗಳಿಗೆ ಸನ್ಮಾನ, ಆರ್ತರಿಗೆ ಸಹಾಯ, ಹಾಗೂ ಹವ್ಯಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಲಯನ್ಸ್ ಮಾಜಿ ಗವರ್ನರ್ ಡಾ.ಎಂ.ಕೆ. ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರತಿಬಿಂಬದ ತಾಲ್ಲೂಕು ಸಂಚಾಲಕ ಹೆಚ್. ರಾಜಾರಾಮರಾವ್ ಹೊಸಬಾಳೆ ಅಧ್ಯಕ್ಷತೆ ವಹಿಸಿದ್ದರು.

ಸಾಗರದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ಮಹಾಬಲೇಶ್ವರ, ಪ್ರಗತಿಪರ ಕೃಷಿಕ ಕಟ್ಟಿನಕೆರೆ ಸೀತಾರಾಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಹವ್ಯಕ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ .ಜಿ.ಜಿ.ಹೆಗಡೆ ತಲಕೇರಿ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಆಯುರ್ವೇದ ವೈದ್ಯ ಡಾ.ನಿರಂಜನ ಹೆಗಡೆ, ಅತಿಥಿಗಳಾಗಿ ಮಹಾಸಭಾದ ನಿರ್ದೇಶಕರಾದ ರಾಜಲಕ್ಷ್ಮೀ ದೇವಪ್ಪ ಬೆಳೆಯೂರು, ವಿದ್ಯಾಭಿವೃಧ್ಧಿಸಂಘ ನಿಸರಾಣಿ ಅಧ್ಯಕ್ಷ ಎನ್. ಹೆಚ್. ಶ್ರೀಪಾದರಾವ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧಾಸೌರಭ ಬಹುಮಾನ ವಿತರಣೆ ಹಾಗೂ ಸಮಾಜದ 12 ಜನ ಸಾಧಕರಿಗೆ ಸನ್ಮಾನ ಮತ್ತು ಆರ್ಥಿಕ ಸಹಾಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Edited By : Somashekar
Kshetra Samachara

Kshetra Samachara

09/12/2024 02:38 pm

Cinque Terre

2.32 K

Cinque Terre

0

ಸಂಬಂಧಿತ ಸುದ್ದಿ