ನವಲಗುಂದ : ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಸದಾನಂದ ಶಿವಣಪ್ಪ ಮಾದರ ಎಂಬುವವರು ಕೊಚ್ಚಿ ಹೋಗಿ ಮೃತ ಪಟ್ಟಿದ್ದು, ತಡಹಾಳ ಗ್ರಾಮದ ಅವರ ಮನೆಗೆ ನವಲಗುಂದ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ಸಾಂತ್ವನ ಹೇಳಿದರು.
ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಪ್ರಕೃತಿವಿಕೋಪ ನಿಧಿಯಿಂದ 5 ಲಕ್ಷ ಪರಿಹಾರ ನೀಡಬೇಕು ಹಾಗೂ ಎಲ್ಲ ಹಳ್ಳಗಳ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕಿನ ಶಲವಡಿ, ಭೋಗಾನೂರ, ನಾಯ್ಕನೂರ, ಬೆನ್ನೂರ, ತಡಹಾಳ, ನಾವಳ್ಳಿ, ತುಪ್ಪದಕುರಹಟ್ಟಿ, ಕೊಂಗವಾಡ ಗ್ರಾಮಗಳಿಗೆ ಹೋಗುವ ಸಂದರ್ಭದಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಹೆಸರು, ಹತ್ತಿ, ಗೋವಿನಜೋಳ, ಈರುಳ್ಳಿ, ಮೆಣಸಿನಕಾಯಿ ಹಾಗೂ ಮುಂತಾದ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಈವರೆಗೂ ಪರಿಹಾರ ನೀಡಿಲ್ಲ ತಕ್ಷಣ ಪರಿಹಾರ ನೀಡಬೇಕೆಂದು ಕೋನರಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಮಜ್ಜಗಿ, ನವಲಗುಂದ ಪುರಸಭೆ ಸದಸ್ಯ ಜೀವನ ಪವಾರ, ಮಾಜಿ ತಾಲೂಕ ಪಂಚಾಯತಿ ಸದಸ್ಯ ಕಲ್ಲಪ್ಪ ಹುಬ್ಬಳ್ಳಿ, ಬಸವರಾಜ ನರಗುಂದ, ಶರೀಫ ಗುದಗಿ, ಬಸಪ್ಪ ಜಲಾದಿ, ಸತೀಶ ಮಮಟಗೀರಿ, ನೀಲಪ್ಪ ಜಕ್ಕನ್ನವರ, ಚಿದಾನಂದ ಕುಸುಗಲ್, ಪುಟ್ಟರಾಜ ಮಣ್ಣೂರ, ನಿಂಗಪ್ಪ ಮರಿನಾಯ್ಕರ, ಪುಂಡಪ್ಪ ಮಾದರ, ಚಂದಪ್ಪ ಚಲವಾದಿ, ಕರಿಯಪ್ಪ ಪೂಜಾರ, ರವಿ ಮೇಟಿ, ಶರಣಪ್ಪ ಕೋಟಿ, ಶಿವಾನಂದ ಚಲವಾದಿ, ಯಲ್ಲಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು.
Kshetra Samachara
04/09/2022 01:08 pm