ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೆಸ್ಕಾಂ ಕಾಮಗಾರಿ - ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಸಾಧ್ಯತೆ

ಕುಂದಗೋಳ : ಹೆಸ್ಕಾಂ ವಿಭಾಗದ ವ್ಯಾಪ್ತಿಯ 33/11 ಕೆ.ವಿ.ಉಪಕೇಂದ್ರ ಕುಂದಗೋಳದಲ್ಲಿ ಹೆಚ್ಚುವರಿಯಾಗಿ 2ನೇ 33/11ಕೆ.ವಿ 5 ಎಮ್.ವಿ.ಎ. ಶಕ್ತಿ ಪರಿವರ್ತಕ ಮತ್ತು 33 ಕೆ.ವಿ-ಬೇ ಅಳವಡಿಸುವ ಕಾಮಗಾರಿಯ ಸಲುವಾಗಿ ಹಾಲಿ ಚಾಲ್ತಿ ಇರುವ 33 ಕೆ.ವಿ ವಿದ್ಯುತ್‌'ನ್ನು ಇಂದು ಡಿಸೇಂಬರ್ 10 ರಿಂದ ನಿಲುಗಡೆ ಗೊಳಿಸಬೇಕಾದ ಕರ್ತವ್ಯ ನಡೆದಿರುತ್ತದೆ.

ಈ ಹಿನ್ನೆಲೆಯಲ್ಲಿ 33/11 ಕೆ.ವಿ ಕುಂದಗೋಳ ವಿದ್ಯುತ್ ಉಪಕೇಂದ್ರದಿಂದ ಹೊರ ಹೋಗುವ ಎಲ್ಲಾ 11 ಕೆ.ವಿ ಫೀಡರ್‌'ಗಳ ವಿದ್ಯುತ್ ನಿಲುಗಡೆ ಗೊಳಿಸಬೇಕಾಗುತ್ತದೆ.

ಪ್ರಸ್ತುತ ಕಾಮಗಾರಿಯೂ ಡಿಸೇಂಬರ್ 10 ರಿಂದ ಸುಮಾರು 15 ದಿನಗಳಲ್ಲಿ ಪೂರ್ಣಗೊಳಿಸುವ ಸಂಭವ ಇರುವುದರಿಂದ ಈ ಅವಧಿಯಲ್ಲಿ ಕುಂದಗೋಳ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ (ಸರಬರಾಜು ಇರುವ) ಎಲ್ಲಾ 11 ಕೆವಿ ಫೀಡರ್'ಗಳಿಗೆ ತಾತ್ಕಾಲಿಕವಾಗಿ ಬೇರೆ ಬೇರೆ ವಿದ್ಯುತ್ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜನ್ನು ಕಲ್ಪಿಸುವ ವೇಳೆ ಕೆಲವೊಂದು ಬಾರಿ ವಿದ್ಯುತ್ ಅಡಚಣೆ ಆಗುವ ಸಾಧ್ಯತೆ ವೇಳೆ ಸಾರ್ವಜನಿಕರು ಹೆಸ್ಕಾಂ ಗ್ರಾಹಕರು ಸಹಕರಿಸಲು ಇಲಾಖೆ ವಿನಂತಿಸಿದೆ.

Edited By : Abhishek Kamoji
Kshetra Samachara

Kshetra Samachara

10/12/2024 08:16 pm

Cinque Terre

16.39 K

Cinque Terre

0