ನವಲಗುಂದ : ಗುರುವಾರ ಸಂಜೆ ನವಲಗುಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಒಂದು ಗಂಟೆಗೂ ಅಧಿಕ ಕಾಲ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಭಾರಿ ಮಳೆಯಿಂದಾಗಿ ಜನರು ಕಂಗಾಲಾಗಿದ್ದರು.
ನವಲಗುಂದದಲ್ಲಿ ಬೆಳಿಗ್ಗೆಯಿಂದ ಉರಿ ಬಿಸಿಲಿನಲ್ಲಿ ಕಂಗೆಟ್ಟ ಜನರಿಗೆ ಸಂಜೆ ಸುರಿದ ಧಾರಾಕಾರ ಆಲಿಕಲ್ಲು ಮಳೆಗೆ ತಂಪಿನ ಅನುಭವ ಆಗಿದಂತೂ ಸುಳ್ಳಲ್ಲ. ಆದರೆ ಗಾಳಿ ಸಹಿತ ಮಳೆಯಿಂದ ಪಟ್ಟಣದ ಹಲವೆಡೆ ವಿದ್ಯುತ್ ವ್ಯತ್ಯಯ ಸಹ ಆಗಿತ್ತು. ಯಾವುದೇ ಅಹಿತಕರ ಘಟನೆ ಬಗ್ಗೆ ಇದುವರೆಗೂ ವರದಿಯಾಗಿಲ್ಲ.
Kshetra Samachara
28/04/2022 07:26 pm