ಕುಂದಗೋಳ : ಸದಾ ವನ್ಯಜೀವಿ ರಕ್ಷಣಾ ಕಾಯಕದಲ್ಲಿ ತೊಡಗಿ ಕುಂದಗೋಳ ತಾಲೂಕಿನಲ್ಲಿ ಹೆಸರುವಾಸಿಯಾದ ವನ್ಯ ಜೀವಿಗಳ ಸಂರಕ್ಷಕ ಅಡಿವೆಪ್ಪ ತಳವಾರ ಮತ್ತೆ ಅಪಾಯದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದ ಹಾಲಕ್ಕಿ ಪಕ್ಷಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಶೇಖಪ್ಪ ಗಾವಡೆ ಎಂಬುವವರ ಮನೆ ಮೇಲ್ಛಾವಣಿಯ ತಗಡುಗಳ ಮಧ್ಯೆ ನೋಡಲು ಗೂಬೆಯಂತೆ ಭಾಸವಾಗುವ ಹಾಲಕ್ಕಿ ಮರಿ ಇಟ್ಟು ಹೋಗಿದ್ದ 5 ಹಾಲಕ್ಕಿಯ ಸಣ್ಣ ಮರಿಗಳನ್ನು ಹಿಡಿದು ತಮ್ಮ ಮನೆಯಲ್ಲಿ ಸಾಕುತ್ತಿದ್ದು, ರೆಕ್ಕೆ ಬಂದು ಹಾರಲು ಯತ್ನಿಸಿದ ಕೂಡಲೇ ಕಾಡಿಗೆ ಬಿಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಚಿತ್ರವೆಂದರೆ, ಹಾಲಕ್ಕಿಗಳ ಬಗ್ಗೆ ಜನರಲ್ಲಿ ಇಂದಿಗೂ ಮೂಢನಂಬಿಕೆ ಅತಿಯಾಗಿದ್ದು, ಹಾಲಕ್ಕಿ ಶಬ್ಧ ಕೇಳದೆ ಇರುವವರ ಮಧ್ಯ ಮನೆಯಲ್ಲಿ ಹಾಲಕ್ಕಿ ಸಾಕಿ ಕಾಡಿಗೆ ಬಿಡುವ ಇವರ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.
Kshetra Samachara
23/01/2021 06:36 pm