ಕಲಘಟಗಿ :ಧಾರವಾಡದಲ್ಲಿ ನಡೆದ ೨೦೨೪ ೨೫ ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜಿಲ್ಲಾಮಟ್ಟದ ಕುಸ್ತಿಯಲ್ಲಿ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
80 ಕೆ.ಜಿಯ ಕುಸ್ತಿಯಲ್ಲಿ ಸುನೀಲ ರಾಮಣ್ಣ ಬಂಡಿವಡ್ಡರ ಪ್ರಥಮ ಸ್ಥಾನ ಪಡೆದಿದ್ದು ಕಾವ್ಯಾ ತುಕಾರಾಮ ದಾನ್ವೆನವರ ೫೩ ಕೆಜಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಬ್ಬರು ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು , ಶಿಕ್ಷಕ ಸಿಬ್ಬಂದಿಯವರು, ಊರಿನ ಗುರು ಹಿರಿಯರು ಅಭಿನಂದಿಸಿದ್ದಾರೆ.
Kshetra Samachara
13/08/2024 10:40 am