ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಖಾಲಿ ಗಾಡಾ ಸ್ಪರ್ಧೆ, ವಿಜೇತರಿಗೆ ಕಾಂಚಾಣ ಎಲ್ಲೇಡೆ ಕೇಕೆ ಚಪ್ಪಾಳೆ

ಕುಂದಗೋಳ : ಎಲ್ಲೇಡೆ ಕೇಕೆ ಚಪ್ಪಾಳೆಗಳ ಸದ್ದು, ಒಂದಕ್ಕಿಂತ ಒಂದು ಜೋಡಿ ವೇಗದ ಓಟ, ನೋಡುಗರಲ್ಲಿ ರೋಮಾಂಚನ ಮತ್ತು ಮನರಂಜನೆಯನ್ನು ಸೃಷ್ಟಿಸುವಲ್ಲಿ ಚಾಕಲಬ್ಬಿ ಗ್ರಾಮದಲ್ಲಿ ನಡೆದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಯಶಸ್ವಿಯಾಗಿದೆ.

ಹೌದು ! ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಎರಡನೇ ಬಾರಿ ದ್ಯಾವನಗೌಡ ಗುರುಸಿದ್ಧಗೌಡ ಪಾಟೀಲ್ ಎಂಬುವವರು ಆಯೋಜಿಸಿದ್ದ ರೈತಾಪಿ ಜನರ ಸ್ಪರ್ಧೆ ಜೋಡೆತ್ತಿನ ಓಟ ಎಲ್ಲರ ಮನ ಗೆದ್ದಿದೆ.

ಚಾಕಲಬ್ಬಿ ಗ್ರಾಮದ ಪೊಲೀಸಗೌಡ್ರ ಪಾಟೀಲ್ ಇವರ ಜಮೀನಿನಲ್ಲಿ ನಡೆದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಕುಂದಗೋಳ ತಾಲೂಕ ಸೇರಿದಂತೆ ರಾಜ್ಯದಾದ್ಯಂತ ಜೋಡೆತ್ತುಗಳು ಭಾಗವಹಿಸಿ ಸ್ಪರ್ಧೆ ನಡೆಸಿದವು.

ಗುರುವಾರ ಬೆಳಿಗ್ಗೆಯಿಂದಲೇ ಆರಂಭ ಜೋಡೆತ್ತಿನ ಸ್ಪರ್ಧೆಯಲ್ಲಿ ಸಂಜೆಯವರೆಗೆ ರೋಚಕ ಸ್ಪರ್ಧೆಗಳು ನಡೆದವು ಕೊನೆಯ ಸುತ್ತಿನಲ್ಲಿ ಹದಲಿ ಗ್ರಾಮದ ಜೋಡೆತ್ತು ಪ್ರಥಮ, ಅನಗೋಳ ಗ್ರಾಮದ ಜೋಡೆತ್ತು ದ್ವೀತಿಯ, ಮಲ್ವಿಗವಾಡ ಗ್ರಾಮದ ಜೋಡೆತ್ತು ತೃತೀಯ, ಸ್ಥಾನ ಪಡೆದರೇ ಆಜ್ರ, ಈಚಲಯಲ್ಲಾಪೂರ ಹಳೇ ಹುಬ್ಬಳ್ಳಿ ಜೋಡೆತ್ತುಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಬಹುಮಾನ ಪಡೆದವು.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ

Edited By : Suman K
Kshetra Samachara

Kshetra Samachara

23/11/2024 02:12 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ