ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾರ್ಷಲ್ ಆರ್ಟ್‌ ಸ್ಪರ್ಧೆಯಲ್ಲಿ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಹುಬ್ಬಳ್ಳಿಯ ಪೋರ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಆತ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ಕರಾಟೆ ಜೊತೆಗೆ ಮಾರ್ಷಲ್ ಆರ್ಟ್‌ ಎಂಬ ಸ್ಪರ್ಧೆಯಲ್ಲಿ, ಭಾಗವಹಿಸಿ ಈಗ ವಿಶ್ವದಾಖಲೆ ಮಾಡಿ ಹುಬ್ಬಳ್ಳಿ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ. ಅಷ್ಟಕ್ಕೂ ಆತ ಯಾರು ಅಂತ ತೋರಿಸ್ತೀವಿ ನೋಡಿ....

ಹೌದು, ಹೀಗೆ ವಿಭಿನ್ನವಾಗಿ ಕರಾಟೆ ತಾಲೀಮು ನಡೆಸುತ್ತಿರುವ ಯುವಕನ ಹೆಸರು, ಅಶ್ವಿನ್ ಶೆಟ್ಟಿಯಾರ. ಮೂಲತಃ ಹುಬ್ಬಳ್ಳಿ ನಿವಾಸಿ ಚಿಕ್ಕ ವಯಸ್ಸಿನಲ್ಲೇ ವಿವಿಧ ಕರಾಟೆ ಕ್ಷೇತ್ರದಲ್ಲಿ ಸಾಧನೆ‌ ಮಾಡಿರುವ ಈತ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಸ್ಥಳೀಯ ಮಟ್ಟದಿಂದ ಹಿಡಿದು, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಬ್ಲ್ಯಾಕ್ ಬೆಲ್ಟ್, ಸೇರಿದಂತೆ ಅನೇಕ ಅವಾರ್ಡ್ ಗಳಿಸಿ ಈಗ ಮತ್ತೊಂದು ಸಾಧನೆ ಮಾಡಿದ್ದಾನೆ. ಮಾರ್ಷಲ್ ಆರ್ಟ್‌ ಎಂಬ ಸ್ಪರ್ಧೆಯಲ್ಲಿ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾನೆ . ಈ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ಇನ್ನು ಚಿಕ್ಕ ವಯಸ್ಸಿನಲ್ಲೆ ಕರಾಟೆ ಪಟು ಆಗಿರುವ ಅಶ್ವಿನ್, ದಿನಕ್ಕೆ ಮೂರ್ನಾಲ್ಕು ಗಂಟೆಗಳ ಕಾಲ ಕರಾಟೆ ಜೊತೆಗೆ ಮಾರ್ಷಲ್ ಆರ್ಟ್ ಪ್ರ್ಯಾಕ್ಟೀಸ್ ಮಾಡುತ್ತಾನೆ. ಒಂದು ನಿಮಿಷದಲ್ಲಿ ಹೆಚ್ಚು ರಷ್ಯನ್ ತಿರುವುಗಳನ್ನು ಮಾಡುವ ಮೂಲಕ ಅಶ್ವಿನ್ ವಿಶ್ವದಾಖಲೆ ಮಾಡಿ ಇದೇ ವರ್ಷ ಜುಲೈ 10 ರಂದು ಅಂತರರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ. ಈತನ ಸಾಧನೆಗೆ ಮನೆಯವರ ಹಾಗೂ ಮಾರ್ಗದರ್ಶಕರ ಪ್ರೋತ್ಸಾಹವೇ ಕಾರಣ ಎಂದಿರುವ ಅಶ್ವಿನ್, ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಕುಟುಂಬಸ್ಥರು ಅಭಿನಂದಿಸಿದ್ದಾರೆ.

ಹೀಗೆ ಅಶ್ವಿನ್ ಸಾಧನೆಯನ್ನು ನೋಡಿ ಇನ್ನಷ್ಟು ಯುವಕರು, ಯುವತಿಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬುದು ಎಲ್ಲರ ಆಶಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

17/08/2021 07:28 pm

Cinque Terre

76.21 K

Cinque Terre

16

ಸಂಬಂಧಿತ ಸುದ್ದಿ