ಹುಬ್ಬಳ್ಳಿ: ಚೆಸ್ ಆಟದಲ್ಲಿ ಭಾರತ ಒಂದಿಲ್ಲೊಂದು ದಾಖಲೆ ಮಾಡುತ್ತಲೇ ಬಂದಿದೆ. ಗುಕೇಶ್ ಅಂತರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅದೇ ರೀತಿಯಲ್ಲಿ ಧಾರವಾಡ ಜಿಲ್ಲೆಯ ಇಬ್ಬರು ಪ್ರತಿಭೆಗಳು ಅಂತರಾಷ್ಟ್ರೀಯ 10ನೇ ಏಷಿಯನ್ ಪೆಸಿಫಿಕ್ ಡೆಫ್ ಗೇಮ್‌ನಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಲೇಷಿಯಾದ ಕೌಲಲಂಪುರದಲ್ಲಿ ನಡೆದ ಡೆಫ್ ವಿಭಾಗದಲ್ಲಿ ಚೇಸ್‌ನಲ್ಲಿ ಸಿಂಗಲ್ಸ್ ಮಹಿಳಾ ವಿಭಾಗದಲ್ಲಿ ಧಾರವಾಡದ ಅಂಬಿಕಾ ಮಸಗಿ ದ್ವೀತಿಯ ಬಹುಮಾನ ಪಡೆದಿದ್ದು, ಬಹುದೊಡ್ಡ ಸಾಧನೆಗೆ ಸಾಕ್ಷಿಯಾಗಿದೆ.
ಧಾರವಾಡದ ಅಂಬಿಕಾ ಅವರು, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, 10ನೇ ಏಷ್ಯಾ ಪೆಸಿಫಿಕ್ ಅಂತರಾಷ್ಟ್ರೀಯ ಪಂದ್ಯದಲ್ಲಿ ಸಿಂಗಲ್ಸ್‌ನಲ್ಲಿ ದ್ವಿತೀಯ ಹಾಗೂ ಮಿಕ್ಸ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಡೆಫ್ ವಿಭಾಗದಲ್ಲಿ ಸಾಧನೆ ಮಾಡಿದ ಮಗಳ ಬಗ್ಗೆ ತಾಯಿ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನೂ ಹುಬ್ಬಳ್ಳಿಯ ಪ್ರತಿಭೆ ಕಿಶನ್ ಹುಲಿಹಳ್ಳಿ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿರುವ ಕಿಶನ್, ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ಡೆಫ್ ಚೆಸ್ ಪಂದ್ಯಾವಳಿ ಭಾಗವಹಿಸಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 2024 ರ ಜುಲೈ 27 ಮತ್ತು 28ರಂದು ಡೆಫ್ ರಾಷ್ಟ್ರೀಯ ಚೆಸ್ ಆಯ್ಕೆಯ ಟ್ರಯಲ್ಸ್ ನಡೆಯಿತು. ಬಳಿಕ ನವೆಂಬರ್ 29 ರಂದು ಮಲೇಶೀಯಾದ ಕೌಲಾಲಂಪುರದಲ್ಲಿ ಅಂತರರಾಷ್ಟ್ರೀಯ ಡೆಫ್ ಏಷ್ಯ ಪೆಸಿಫಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಒಟ್ಟಿನಲ್ಲಿ ಭಾರತ ಚೆಸ್ ವಿಭಾಗದಲ್ಲಿ ಒಂದಿಲ್ಲೊಂದು ಮಹತ್ವದ ಸಾಧನೆ ಮಾಡುತ್ತಲೇ ಬಂದಿರುವುದು ನಿಜಕ್ಕೂ ವಿಶೇಷವಾಗಿದೆ. ಧಾರವಾಡ ಜಿಲ್ಲೆಯ ಪ್ರತಿಭೆಗಳ ಕೀರ್ತಿ ಜಗದ್ವಿಖ್ಯಾತವಾಗಿ ಬೆಳೆಯಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/12/2024 07:46 am