ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನ್ಯಾಯಾಂಗ ನಿಂದನೆ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೂ ಕೇಸ್ ದಾಖಲಿಸುತ್ತೇನೆ: ಮುತಾಲಿಕ್

ಧಾರವಾಡ: ನಿನ್ನೆ ಹಿಜಾಬ್ ವಿಷಯದ ಕುರಿತು ಹೈಕೋರ್ಟ್ ಕೊಟ್ಟ ತೀರ್ಪಿಗೆ ವಿರುದ್ಧವಾಗಿ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಮಾತನಾಡಿದ್ದಾರೆ. ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿದ್ದಾರೆ. ಹಿಜಾಬ್ ವಿಷಯವಾಗಿ ಹೈಕೋರ್ಟ್ ಮೆಟ್ಟಿಲೇರಿದ ಆರು ಜನ ವಿದ್ಯಾರ್ಥಿನಿಯರ ಮೇಲೂ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹಿಜಾಬ್ ಕುರಿತ ಆದೇಶ ಹೊರ ಬಂದ ನಂತರ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿ ಆದೇಶದ ವಿರುದ್ಧ ಮಾತನಾಡಿದ್ದಾರೆ. ಅಲ್ಲದೇ ಸಿಎಫ್‌ಐ ರಾಜ್ಯ ಅಧ್ಯಕ್ಷ ಅತಾವುಲ್ಲಾ ಎನ್ನುವವರು ಇದೊಂದು ಅಸಂವಿಧಾನಿಕ ತೀರ್ಪು ಎಂದು ಕೋರ್ಟಿನ ವಿರುದ್ಧ ಮಾತನಾಡಿದ್ದಾರೆ. ಇವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಧಾರವಾಡ ಹೈಕೋರ್ಟ್‌ ಅಡಿಶನಲ್ ಅಡ್ವೋಕೇಟ್ ಜನರಲ್ ಅವರ ಬಳಿ ಪರವಾನಿಗಿ ಕೇಳಿದ್ದೇವೆ ಎಂದರು.

ಪರವಾನಿಗಿ ಸಿಕ್ಕ ನಂತರ ನಾನೇ ಸ್ವತಃ ಬೆಂಗಳೂರಿಗೆ ಹೋಗಿ ಅತಾವುಲ್ಲಾ ಸೇರಿದಂತೆ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೂ ಕೇಸ್ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಈ ಸಂದರ್ಭ ಅಭಿಪ್ರಾಯಪಟ್ಟರು.

ಸ್ಲಗ್; ನ್ಯಾಯಾಂಗ ನಿಂದನೆ ಮಾಡಿದವರ ವಿರುದ್ಧ ಕೇಸ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/03/2022 04:38 pm

Cinque Terre

79.63 K

Cinque Terre

88

ಸಂಬಂಧಿತ ಸುದ್ದಿ