ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ Exclusive: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ - ಇನ್ಸ್‌ಪೆಕ್ಟರ್ ಮೇಲೆ ಕ್ರಮಕ್ಕೆ ಮುಂದಾದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಫಾಲೋವಪ್ ಸ್ಟೋರಿ.. ವರದಿ ಬಂದ ಕೂಡಲೇ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ ಮೇಲೆ ಕ್ರಮಕ್ಕೆ ಮುಂದಾ ಖಡಕ್ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್. ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ, ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ ಆರೋಪ ಕೇಳಿ ಬಂದಿದ್ದು, ಇನ್ನು ಈ ವಿಶೇಷವಾಗಿ ಇನ್ಸ್‌ಪೆಕ್ಟರ್ ಯಳ್ಳೂರ ಮೇಲೆ ತನಿಖೆಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸೂಚನೆ ನೀಡಿದ್ದಾರೆ.

ಹೌದು. ಪೊಲೀಸರೆಂದ್ರೆ ಸಾರ್ವಜನಿಕರ ರಕ್ಷಕರಾಗಿರಬೇಕು. ಆದ್ರೆ ಈ ಇನ್ಸ್‌ಪೆಕ್ಟರ್ ಭಕ್ಷಕರಾಗಿ ತಮ್ಮ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮೇಲೆ ಕಿರುಕುಳ ನೀಡುತ್ತಿರುವ ಬಗ್ಗೆ ಅಲ್ಲಿಯೇ ನೊಂದ ಮಹಿಳಾ ಸಿಬ್ಬಂದಿ ಮೂರು ಪುಟದಲ್ಲಿ ಪತ್ರ ಬರೆದು ಸರ್ಕಾರಕ್ಕೆ ಮತ್ತು ಪೊಲೀಸ್‌ ಕಮಿಷನರ್‌ ಎದರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಹಿಳಾ ಪೇದೆಗಳಿಗರ ವಿಡಿಯೋ ಕಾಲ್ ಮಾಡಿ ಕಾಮಪ್ರಚೋದಕ ಮಾತಗಳನ್ನಾಡುತ್ತಾನಂತೆ.

ವಿಡಿಯೋ ಕಾಲ್‌ನಲ್ಲಿ ಸರಿಯಾಗಿ ಮಾತನಾಡದೆ ಹೋದ್ರೆ ನಿರಂತರವಾಗಿ ಕಿರುಕುಳ ಕೊಡುತ್ತಾರೆ. ವಿಡಿಯೋ ಕಾಲ್ ಅಸಹ್ಯ ಪದಗಳನ್ನ ಮಾತಾಡ್ತ್ತಾರೆ. ರಜೆ ಕೇಳಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. ಹೀಗೆ ಹಲವಾರು ರೀತಿಯಲ್ಲಿ ಮಹಿಳಾ ಸಿಬ್ಬಂದಿ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದನಂತೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ದಲ್ಲಿ ಸುದ್ದಿ ಬಿತ್ತರಿಸಿ ಪೊಲೀಸ್ ಕಮಿಷನರ್ ಗಮನಕ್ಕೆ ತಂದಾಗ, ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತದೆ. ಮಹಿಳಾ ಸಿಬ್ಬಂದಿಗೆ ನ್ಯಾಯ ಕೊಡಿಸುತ್ತೆವೆಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಒಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಂದ್ರೆ ಮನೆ ಹಿರಿಯರು ಎಂದರ್ಥ. ಆದ್ರೆ ಈ ಇನ್ಸ್‌ಪೆಕ್ಟರ್ ಯಳ್ಳೂರ ಮಾತ್ರ ತಮ್ಮ ಮನೆಯವರ ಮೇಲೆ ಕಣ್ಣು ಹಾಕಿದ್ದು ಎಷ್ಟರ ಮಟ್ಟಿಗೆ ಸರಿ ಅಂತ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರಶ್ನಿಸಿದ್ದಾರೆ. ಹೊತೆಗೆ ಈ ಬಗ್ಗೆ ಸೂಕ್ತವಾದ ತನಿಖೆ ಮಾಡಿ, ಮಹಿಳಾ ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

ವರದಿ: ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/12/2024 03:18 pm

Cinque Terre

27.29 K

Cinque Terre

9

ಸಂಬಂಧಿತ ಸುದ್ದಿ