ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಕ್ಷಕರೇ ಭಕ್ಷಕರಾದ ಸ್ಟೋರಿ ಇದು.... ಹೋಮ್ ಮಿನಿಸ್ಟರ್ ಜಿ. ಪರಮೇಶ್ವರ, ಕಮಿಷನರ್ ಎನ್ ಶಶಿಕುಮಾರ್ ನೀವು ನೋಡಲೇಬೇಕಾದ ಸ್ಟೋರಿ ಇದು...
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಒಬ್ಬ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ಠಾಣೆಯ ಇಡೀ ಮಹಿಳಾ ಸಿಬ್ಬಂದಿ ನಮಗೆ ನ್ಯಾಯ ಕೊಡಿಸಿ ಎಂದು ಮೂರು ಪೇಜ್‌ಗಳಲ್ಲಿ ಹೋಮ್ ಮಿನಿಸ್ಟರ್, ಸಿಎಂ, ಡಿಸಿಎಂ, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಸೇರಿದಂತೆ ಹಲವಾರು ಮೇಲಾಧಿಕಾರಿಗಳಿಗೆ ಲೇಟರ್ ಬರೆದಿದ್ದಾರೆ. ಅಷ್ಟಕ್ಕೂ ಆ ಕಾಮಿ ಇನ್ಸ್‌ಪೆಕ್ಟರ್ ಯಾರು? ಆ ಲೇಟರ್‌ನಲ್ಲಿ ಏನಿದೆ ಎಂಬುದನ್ನು ನಾವು ತೋರಿಸುತ್ತೇವೆ ನೋಡಿ...
ಹೌದು. ಹುಬ್ಬಳ್ಳಿ-ಧಾರವಾಡದ ವೇರಿ ಖಡಕ್ ಐಪಿಎಸ್ ಅಧಿಕಾರಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಾಹೇಬ್ರೆ ನೀವೆ ಗಮನಿಸಬೇಕಾದ ಸ್ಟೋರಿ ಇದು. ಒಬ್ಬ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ನಿಂದ ದಿನನಿತ್ಯ ಮಹಿಳಾ ಸಿಬ್ಬಂದಿ ಕಿರುಕುಳ ಅನುಭವಿಸುತ್ತಿದ್ದಾರೆ. ಇದಿಷ್ಟು ಗಂಭೀರ ಆರೋಪ ಕೇಳಿ ಬಂದಿದ್ದು ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ ಮೇಲೆ. ಈ ಮಹಾನುಭಾವ ರಾತ್ರಿಯಾದ್ರೆ ಮಹಿಳಾ ಕಾನ್ಸ್‌ಟೇಬಲ್‌ಗಳಿಗೆ ವಿಡಿಯೋ ಕಾಲ್ ಮಾಡ್ತಾನಂತೆ. ವಿಡಿಯೋ ಕಾಲ್ ಮಾಡಿ ಕಾಮಪ್ರಚೋದಕ ಮಾತಗಳನ್ನಾಡುತ್ತಾನಂತೆ. ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ ಕಿರುಕುಳದಿಂದ ಬೇಸತ್ತು ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ಸೇರಿದಂತೆ ಹಲವರಿಗೆ ನೊಂದ ಮಹಿಳಾ ಸಿಬ್ಬಂದಿ ಮೂರು ಪುಟಗಳಲ್ಲಿ ತಮಗೆ ಆಗುವ ಅನ್ಯಾಯದ ಬಗ್ಗೆ, ದೂರು ಬರೆದು ಮನವಿ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಇನ್ಸ್‌ಪೆಕ್ಟರ್ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇನ್ಸ್‌ಪೆಕ್ಟರ್ ನೀಡುತ್ತಿರುವ ಕಿರುಕುಳದಿಂದ ನಮ್ಮನ್ನ ರಕ್ಷಿಸಬೇಕೆಂದು ನೊಂದ ಮಹಿಳಾ ಕಾನ್ಸ್‌ಟೇಬಲ್‌ಗಳು ಬೇಡಿಕೊಂಡಿದ್ದಾರೆ..
ಇನ್ನು ಈ ಮನವಿ ಪತ್ರದಲ್ಲಿ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರು ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ಪ್ರತಿಯೊಂದನ್ನು ಮಹಿಳಾ ಸಿಬ್ಬಂದಿ ಬಿಚ್ಚಿಟ್ಟಿದ್ದಾರೆ. ರಾತ್ರಿ ಆದ್ರೆ ವಿಡಿಯೋ ಕಾಲ್ ಮಾಡಿ ನಮ್ಮ ಜೊತೆಗೆ ಕೆಟ್ಟದಾಗಿ ಮಾತನಾಡುತ್ತಾರೆ. ವಿಡಿಯೋ ಕಾಲ್‌ನಲ್ಲಿ ಸರಿಯಾಗಿ ಮಾತನಾಡದೆ ಹೋದ್ರೆ ನಿರಂತರವಾಗಿ ಕಿರುಕುಳ ಕೊಡುತ್ತಾರೆ. ವಿಡಿಯೋ ಕಾಲ್‌ನಲ್ಲಿ ಅಸಹ್ಯ ಪದಗಳನ್ನು ಬಳಕೆ ಮಾಡುತ್ತಾರೆ. ರಜೆ ಕೇಳಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. ಇನ್ಸ್‌ಪೆಕ್ಟರ್ ಮಾಡುವ ಆಟಕ್ಕೆ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿವೆ. ಇನ್ಸ್‌ಪೆಕ್ಟರ್ ನಿಂದ ನಮಗೆ ಮುಕ್ತಿ ಕೊಡಿಸಿ ಎಂದು ಮಹಿಳಾ ಸಿಬ್ಬಂದಿ ಅಂಗಲಾಚಿ ಕೇಳಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಹೋಮ್ ಮಿನಿಸ್ಟರ್ ಜಿ. ಪರಮೇಶ್ವರ ಮತ್ತು ಖಡಕ್ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಈ ಮಹಿಳಾ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುತ್ತಾರಾ..? ಸಾರ್ವಜನಿಕ ವಲಯದಲ್ಲಿ ಸಿಂಗ್ಂ ಎನಿಸಿಕೊಂಡ ಕಮೀಷನರ್ ಎನ್. ಶಶಿಕುಮಾರ್ ಅವರು ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರನಿಂದ ಮಹಿಳಾ ಸಿಬ್ಬಂದಿ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಪ್ಪಿಸುತ್ತಾರಾ...? ಎಂಬುದನ್ನು ಕಾಯ್ದು ನೋಡಬೇಕಾಗಿದೆ.
ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2024 11:35 am