ಹುಬ್ಬಳ್ಳಿ: ಇವರೆಲ್ಲ ಸುಮಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿದ ಶಾಸಕ ಅಬ್ಬಯ್ಯ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ನೀರಿನ ಬೋರ್‌ವೆಲ್ ಪೈಪ್ ಅಳವಡಿಸಲು ಹೇಳಿದ್ದಾರೆ. ಆದ್ರೆ ಅಸಲಿ ವಿಷಯನೇ ಬೇರೆ ಇದೆ. ಏನೆಂದ್ರೆ ಇಲ್ಲಿನ ಕಾರ್ಪೊರೇಟರ್ ಪೂಜಾ ಸತೀಶ ಶೇಜವಾಡಕರ ಇದಕ್ಕೆ ಅಡ್ಡಿ ಪಡಿಸಿದ್ದಾರಂತೆ!
ಹೌದು..ವಾರ್ಡ್ ನಂಬರ 64ರಲ್ಲಿ ಬರುವ ಗಣೇಶಪೇಟ್ ವಡ್ಡರ ಓಣಿಯಲ್ಲಿ ಒಂದು ಬೋರನ್ನು ಅಳವಡಿಸಿದ್ದಾರೆ. ಆದ್ರೆ ಇಲ್ಲಿ ಬಡಜನರು ಹೆಚ್ಚು ಹಾಗಾಗಿ ನೀರು ಸಂಗ್ರಹ ಮಾಡಿಕೊಳ್ಳಲು ಆಗುವುದಿಲ್ಲ. ಆದ ಕಾರಣ ಈ ಓಣಿಯಲ್ಲಿ ಬೋರ್ ಪೈಪ್ ಅಳವಡಿಸಿ ಇನ್ನಷ್ಟು ಬೋರ್ ಪಾಯಿಂಟ್ ಮಾಡಿ ಕೊಳ್ಳಲು, ಈ ಭಾಗದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಮನವಿಗೆ ಸ್ಪಂದಿಸಿದ ಶಾಸಕ ಅಬ್ಬಯ್ಯ ಎಲ್ ಆ್ಯಂಡ್ ಟಿ ಕಂಪನಿಗೆ ಹೇಳಿ ಅನುಮತಿ ಕೂಡ ನೀಡಿದ್ದರು. ಆದ್ರೆ ಇಲ್ಲಿನ ಕಾರ್ಪೊರೇಟರ್ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ಕರೆ ಮಾಡಿ ವಡ್ಡರ ಓಣಿಯಲ್ಲಿ ಬೋರ್ ಪೈಪ್ ಹಾಕಬೇಡಿ ಎಂದು ಹೇಳಿದ್ದಾರೆಂದು ಇಲ್ಲಿನ ಜನರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಈ ಎಲ್ಲದರ ಬಗ್ಗೆ ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ಫುಲ್ ಡಿಟೈಲ್ಸ್ ನೀಡುತ್ತಾರೆ ನೋಡಿ...
ಒಟ್ನಲ್ಲಿ ಗಂಡ ಹೆಂಡತಿ ಜಗಳದಲ್ಲಿ ನಡುವೆ ಕೂಸು ಬಡವಾಯ್ತು ಎಂಬಂತಾಗಿದೆ ವಡ್ಡರ ಓಣಿಯ ಜನರ ಪರಿಸ್ಥಿತಿ . ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇಲ್ಲಿನ ಜನರ ಸಮಸ್ಯೆ ಬಗೆ ಹರಿಸಬೇಕಾಗಿದೆ....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ....
Kshetra Samachara
20/09/2022 06:05 pm