ಹುಬ್ಬಳ್ಳಿ. : ನಗರಕ್ಕೆ ಬೆಳ್ಳಂ ಬೆಳಿಗ್ಗೆಯೇ ವರುಣನ ಆಗಮನವಾಗಿದ್ದು, ಧಾರಾಕಾರವಾಗಿ ಸುರಿಯುತ್ತಿರವ ಮಳೆಯಿಂದ ಜನತೆ ಖುಷ್ ಆಗಿದ್ದಾರೆ.
ಹೌದು ! ಬೆಳ್ಳಂ ಬೆಳಿಗ್ಗೆ ವರುಣನ ಆಗಮನದಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಹೊರಡುವ ಜನರು ಮಾರ್ಗ ರಸ್ತೆ ಮಧ್ಯದಲ್ಲಿ ಮಳೆಗೆ ಸಿಲುಕಿ ಪರದಾಡುವಂತಾಗಿದೆ.
ನಿನ್ನೆ ಸಂಜೆಯಿಂದ ಆರಂಭವಾಗಿದ್ದ ಮಳೆ ಬೆಳಿಗ್ಗೆ ಸ್ವಲ್ಪ ಹೊತ್ತು ಬಿಡುವು ನೀಡಿತ್ತು. ಈಗ ಮತ್ತೇ ವರುಣನ ಅಬ್ಬರ ಜೋರಾಗಿದ್ದು, ಜನರು ರಸ್ತೆಯಲ್ಲಿಯೇ ಅಂಗಡಿ ಮುಂಗ್ಗಟ್ಟುಗಳ ಆಶ್ರಯ ಪಡೆದುಕೊಂಡಿರುವಂತ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ.
Kshetra Samachara
18/05/2022 12:50 pm