ನವಲಗುಂದ: ಬ್ಯಾಲ್ಯಾಳ ಮತ್ತು ಗುಮ್ಮಗೋಳ ಗ್ರಾಮಗಳ ಮಧ್ಯದ ಮಾರೋಹಳ್ಳದ ಬಳಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿತ್ತು. ಆದರೆ ಈಗ ಅದೇ ಪ್ರದೇಶದಲ್ಲೇ ಇರುವ ಹಾರ್ನಹಳ್ಳದ ಬಳಿ ಕತ್ತೆ ಕಿರುಬ ಕಂಡು ಬಂದಿದ್ದು, ಅಂದು ಕಂಡ ಚಿರತೆಯಂತಹ ಪ್ರಾಣಿ ಕತ್ತೆ ಕಿರುಬ ಎಂದು ಶಂಕಿಸಲಾಗಿದೆ.
ಹೌದು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬ್ಯಾಲ್ಯಾಳ ಗ್ರಾಮದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮದ ಪ್ರೌಢಶಾಲಾ ಶಿಕ್ಷಕಿಯೊಬ್ಬರು ತಮಗೆ ಚಿರತೆ ಕಾಣಿಸಿತು ಎಂದು ಹೇಳಿದ್ದರು. ಇದರಿಂದಾಗಿ ಹುಬ್ಬಳ್ಳಿ ಹಾಗೂ ಧಾರವಾಡದಿಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಲಾಗಿತ್ತು.
Kshetra Samachara
21/03/2022 10:11 pm