ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ವರುಣಾರ್ಭಟ : ಮನೆಗೆ ನುಗ್ಗಿದ ಕೊಳಚೆ ನೀರು

ಅಣ್ಣಿಗೇರಿ : ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ಪಟ್ಟಣದಲ್ಲಿ ಸಂಜೆ 4ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಪಟ್ಟಣದ ರಾಜರಾಜೇಶ್ವರಿ ನಗರ, ಅಮೃತನಗರ, ಆಕಾಶ್ ಪಾರ್ಕ್ ಹಾಗೂ ದೇಶಪಾಂಡೆ ಪ್ಲಾಟ್ , ಮಜ್ಜಿಗುಡ್ಡ ರಸ್ತೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಮಳೆ ನೀರು ಸಂಗ್ರಹಣೆಗೊಂಡು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ಇನ್ನು ರಾಜ ರಾಜೇಶ್ವರಿ ನಗರದ ಬಡಾವಣೆಯಲ್ಲಿ ಕೊಳಚೆ ನೀರು ಮನೆಗೆ ನುಗ್ಗಿದೆ. ಮಜ್ಜಿಗುಡ್ಡ ರಸ್ತೆಯಲ್ಲಿರುವ ಬೃಹದಾಕಾರದ ಗಟಾರಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿವೆ. ಪಟ್ಟಣದಲ್ಲಿರುವ ಅನೇಕ ರಸ್ತೆ ಹಾಗೂ ಗಟಾರುಗಳು ಅವೈಜ್ಞಾನಿಕತೆಯಿಂದ ಕೂಡಿರುವದರಿಂದ ಈ ಅವಸ್ಥೆ ಸಂಭವಿಸುತ್ತಿವೆ ಎಂದು ಸ್ಥಳೀಯರು ಪುರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/10/2021 06:49 pm

Cinque Terre

31.35 K

Cinque Terre

0

ಸಂಬಂಧಿತ ಸುದ್ದಿ