ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕೆಂಪಾದಳು ಬೇಡ್ತಿ

ವರದಿ:ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ:ತಾಲೂಕಿನ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಜೀವನದಿ ಬೇಡ್ತಿ ಕೆಂಪಾಗಿದ್ದಾಳೆ.

ಇದೇನು ಬೇಡ್ತಿ ಕೆಂಪಾದಳು ಎಂದು ಕೇಳುತ್ತಿದ್ದಿರಾ!

ಹೌದು ತಾಲೂಕಿನಲ್ಲಿ ಹರಿದಿರುವ ಜೀವನದಿ ಎಂದೇ ಹೆಸರಾಗಿರುವ ಬೇಡ್ತಿ ಹಳ್ಳ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದೆ ಅಷ್ಟೇ ಅಲ್ಲ ,ಮಳೆಯ ನೀರು ಭೂಮಿತಾಯಿಯ ಮೇಲೆ ಬಿದ್ದು,ಬೇಡ್ತಿ ಹಳ್ಳ ಕೆಂಪಗೆ ಬಣ್ಣ ತುಂಬಿಕೊಂಡು ಮೈದುಂಬಿ ಹರಿಯುವಂತೆ ಮಾಡಿದ್ದಾಳೆ.

ಆದರೆ ಬೇಡ್ತಿ ಮಾತ್ರ ಮಳೆಗಾಲದಲ್ಲಿ ಮಾತ್ರ ಹರಿಯುತ್ತಾಳೆ,ಉಳಿದ ದಿನಗಳಲ್ಲಿ ಬರಿದಾಗಿರುವ ಬೇಡ್ತಿ ಮತ್ತೆ ಮಳೆಗಾಲಕ್ಕೆ ಕಾಯ ಬೇಕು.

ಕಲಘಟಗಿ ತಾಲೂಕಿನಲ್ಲಿ ಕಳೆದ ಎರಡ ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು,ಇಲ್ಲಿನ ಬೇಡ್ತಿ ಮೈದುಂಬಿ ಹರಿಯುತ್ತಾಳೆ

ಹಿಂಡಸಗೇರಿ,ಬೆಲವಂತರ,ಹತ್ತಿರ ಹರಿದಿರುವ ಬೇಡ್ತಿ ಹಳ್ಳದಲ್ಲಿ ಕೆಂಪು ಮಳೆ ನೀರು ಹರಿಯುತ್ತಿದ್ದು,ಬೇಡ್ತಿ ಕೆಂಪಾಗಿದ್ದಾಳೆ.

Edited By : Nagesh Gaonkar
Kshetra Samachara

Kshetra Samachara

22/09/2020 12:57 pm

Cinque Terre

33.5 K

Cinque Terre

2

ಸಂಬಂಧಿತ ಸುದ್ದಿ