ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಸ್ತೆ ಬದಿ ಅರಣ್ಯ ಇಲಾಖೆ ನೆಟ್ಟ ಗಿಡಗಳ ಜವಾಬ್ದಾರಿ ಯಾರದ್ದು ?

ಕುಂದಗೋಳ : ಪ್ರಕೃತಿ ನಾಶ ಮಾನವ ಕುಲದ ಸರ್ವನಾವ ಎಂಬ ನಾಣ್ಣುಡಿಯನ್ನ ನಾವು ನೀವು ಕೇಳಿರುತ್ತೆವೆ. ಈ ನಾಣ್ಣುಡಿಯಂತೆ ತಾಲೂಕಿನ ರಸ್ತೆಗಳ ಪಕ್ಕ ವಲಯ ಅರಣ್ಯಾಧಿಕಾರಿಗಳು ನೆಟ್ಟ ಮರಗಳು ದಿಕ್ಕಿಲ್ಲದೆ ಅನಾಥವಾಗಿ ನಾಶವಾಗುತ್ತಿವೆ.

ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳ ರಸ್ತೆಗಳ ಪಕ್ಕ ಕುಂದಗೋಳ ಮತ್ತು ಹುಬ್ಬಳ್ಳಿ ವಲಯ ಅರಣ್ಯ ಕಚೇರಿ ವತಿಯಿಂದ ಗಿಡಗಳನ್ನು ನೆಡಲಾಗಿದೆ.

ಆದರೆ ಸದ್ಯದ ಸ್ಥಿತಿಯಲ್ಲಿ ಆ ಗಿಡಗಳಿಗೆ ಸೂಕ್ತ ನಿರ್ವಹಣೆ ಸಿಗದೆ ರೆಂಬೆ ಕೊಂಬೆಗಳು ಮುರಿದು ಗಿಡಗಳು ಇಂದು ನಾಳೆಯೋ ನಾಶವಾಗುವ ಹಂತದಲ್ಲಿವೆ.

ನೀವಿಲ್ಲಿ ನೋಡುತ್ತಿರುವ ಮರಗಳೇ ನಾವು ಹೇಳೊ ಮಾತಿಗೆ ಸಾಕ್ಷಿ. ಈಗಾಗಲೇ ಕುಂದಗೋಳ ವಲಯ ಅರಣ್ಯಾಧಿಕಾರಿಗಳು ನೆಟ್ಟ ಗಿಡಗಳು ಮೂರು ವರ್ಷ ದಾಟಿದ ಕಾರಣ ಅವುಗಳ ನಿರ್ವಹಣೆ ಬಂದ್ ಮಾಡಿದ್ದಾರೆ.

ಆದ್ರೆ ಈ ಕುರಿಗಾಹಿಗಳು, ಕಟ್ಟಿಗೆ ಮಾಡುವವರು ಮತ್ತು ವಿಪರೀತ ಗಾಳಿ ಹೊಡೆತಕ್ಕೆ ಸಿಕ್ಕು ರೆಂಬೆ ಕೊಂಬೆ ಮುರಿದಿವೆ. ಇದರಲ್ಲೇ ಕೆಲ ಗಿಡಗಳು ನೆಲ ಬಿಟ್ಟು ಇಂದಿಗೂ ಮೇಲಕ್ಕೆ ಎಂದಿಲ್ಲ.

ರಸ್ತೆಗಳಿಗೆ ಹೊಂದಿಕೊಂಡು ನೆಟ್ಟಿರುವ ಮೂರು ವರ್ಷದ ಒಳಗಿನ ಗಿಡಗಳು ಸೇರಿ ಎಲ್ಲ ಗಿಡಗಳಿಗೂ ಸುತ್ತ ಕಸ ಬೆಳೆದು ಕಡ್ಡಿ ಹುಲ್ಲು, ಮುಳ್ಳು ಬೇಲಿ ಸುತ್ತಿ ಹಾಕಿಕೊಂಡಿದ್ದು ಗಿಡಗಳು ನೆಲ ಬಿಟ್ಟು ಮೇಲೆಳಲು ಸಾಧ್ಯವಾಗಿಲ್ಲ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಿಡಗಳ ರಕ್ಷಣೆಗೆ ಮುಂದಾದ್ರೆ ಒಳಿತು.

Edited By : Manjunath H D
Kshetra Samachara

Kshetra Samachara

19/12/2020 03:20 pm

Cinque Terre

28.69 K

Cinque Terre

0

ಸಂಬಂಧಿತ ಸುದ್ದಿ