ಕಲಘಟಗಿ:ತಾಲೂಕಿನ ಅರಣ್ಯದಂಚಿನ ಹುಲಗಿನಕೊಪ್ಪ ಗ್ರಾಮದ ರೈತರ ಹೊಲಗಳಿಗೆ ಬುಧವಾರ ರಾತ್ರಿ ಆನೆಗಳು ಲಗ್ಗೆ ಇಟ್ಟ ಪರಿಣಾಮ ಅಪಾರ ಬೆಳೆ ಹಾನಿಯಾಗಿದೆ.
ಗ್ರಾಮದ ಮಹೇಶ ಅಲಗೂರ ಅವರ ಜಮೀನಿನಲ್ಲಿ ಬೆಳೆಯಲಾದ ಕಬ್ಬು ಹಾಗೂ ರೈತರು ಬೆಳೆದ ಭತ್ತದ ಬೆಳೆ ಹಾಗೂ ಭತ್ತದ ಬಣವೆ ಹಾಳಾಗಿದೆ .ಪ್ರತಿ ವರ್ಷ ಆನೆ ದಾಳಿಯಿಂದ ತಾಲೂಕಿನ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡ ಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
12/11/2020 11:28 am