ಕುಂದಗೋಳ : ಅತಿವೃಷ್ಟಿಗೆ ಸಿಲುಕಿದ ರೈತರ ಮೆಣಸಿನಕಾಯಿ ಬೆಳೆಗೆ ಈಗಾಗಲೇ ಕೇಂದ್ರ ಸರ್ಕಾರ ಬೆಳೆ ವಿಮೆ ಬಿಡುಗಡೆ ಮಾಡಲಾಗಿದೆ ಆದ್ರೇ ಹತ್ತಿ, ಶೇಂಗಾ, ಉದ್ದು, ಹೆಸರು ಯಾಕೆ ಬೆಳೆ ವಿಮೆ ಬಿಡುಗಡೆ ಮಾಡಿಲ್ಲಾ ಎಂಬುದು ರೈತರ ಪ್ರಶ್ನೆಯಾಗಿದೆ.
ಕಳೆದ ಮೂರು ದಿನಗಳಿಂದ ಇಬ್ಬನಿ ಹೆಚ್ಚಿದ ಕಾರಣ ಕಡಲೆ ಹುಳಿ ತೊಳೆದು ಹೋಗಿದ್ರೇ ಜೋಳ ಮುಸುಕು ಹಾಕಿದೆ, ಈ ಪರಿಣಾಮ ರೈತರು ಬೆಳೆಗಳೂ ಒಂದೊಂದು ಹಾಳಾಗುತ್ತಿವೆ.
ಈ ಪರಿಸ್ಥಿತಿ ಅವಲೋಕಿಸಿ ಸರ್ಕಾರ ಹಾಗೂ ವಿಮಾ ಕಂಪನಿಗಳು ಮೆಣಸಿನಕಾಯಿ ಬೆಳೆಯಂತೆ ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ನೀಡಲಿ ಎಂದು ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ವತಃ ರೈತ ಬಸವರಾಜ ಯೋಗಪ್ಪನವರ ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವೀಕ್ಷಕರ ವರದಿ
Kshetra Samachara
18/01/2022 09:49 am