ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರೈತಾಪಿ ಜಮೀನಿಗೆ ವಿಜ್ಞಾನಿಗಳ ಎಂಟ್ರಿ ! ಬೆಳೆ ರಕ್ಷಣೆ ಪಾಠ

ಕುಂದಗೋಳ : ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ರೈತಾಪಿ ಜನರ ಜಮೀನಿನತ್ತ ಕೀಟ ಶಾಸ್ತ್ರ ವಿಜ್ಞಾನಿಗಳು ಆಗಮಿಸಿ ಬೆಳೆ ರಕ್ಷಣೆಯ ಪಾಠವನ್ನು ಕುಂದಗೋಳ ತಾಲೂಕಿನಲ್ಲಿ ಕೈಗೊಂಡಿದ್ದಾರೆ.

ಹೌದು ! ಕುಂದಗೋಳ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಹಿಂಗಾರು ಬಿತ್ತನೆಯಾದ ಜಮೀನುಗಳಿಗೆ ತೆರಳಿದ ಅಧಿಕಾರಿಗಳು ಬೆಳೆಗೆ ತಗುಲಿದ ರೋಗದ ಹತೋಟಿ ಕ್ರಮ, ಬೆಳೆ ಬದಲಾವಣೆ, ಮಣ್ಣು ಸಂರಕ್ಷಣೆಯ, ಕೀಟಗಳ ನಿಯಂತ್ರಣದ ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸುತ್ತಿದ್ದಾರೆ.

ಅದರಂತೆ ಇಂದು ಕುಂದಗೋಳ ತಾಲೂಕಿನಲ್ಲಿ ಈ ವರ್ಷ 20,500 ಹೆಕ್ಟೇರ್ ಕಡಲೆ, 2000 ಹೆಕ್ಟೇರ್ ಗೋಧಿ, 750 ಹೆಕ್ಟೇರ್ ಗೋಧಿ, 4500 ಹೆಕ್ಟೇರ್ ಜೋಳ ಬಿತ್ತನೆಯಾಗಿದ್ದು, ಆ ಬೆಳೆಗಳ ರಕ್ಷಣೆಗೆ ವಿಜ್ಞಾನಿಗಳು ಕೊಟ್ಟ ಮಾಹಿತಿ ಹೀಗಿದೆ.

ಕುಂದಗೋಳ ತಾಲೂಕಿನ ವಿವಿಧ ಭಾಗಗಳಿಗೆ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಸಹಯೋಗದಲ್ಲಿ ಭೇಟಿ ನೀಡುತ್ತಿರುವ ಅಧಿಕಾರಿಗಳು ಹಿಂಗಾರು ಬೆಳೆ ರಕ್ಷಣೆ ಮತ್ತು ಬೆಳೆ ಬದಲಾವಣೆ ಮಾಡಿ ಇಳುವರಿ ಹೆಚ್ಚಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Suman K
Kshetra Samachara

Kshetra Samachara

10/12/2024 03:51 pm

Cinque Terre

15.22 K

Cinque Terre

0

ಸಂಬಂಧಿತ ಸುದ್ದಿ