ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅನ್ನದಾತನಿಗೆ ಮುಳುವಾದ ಮಳೆ, ಇದುವರೆಗೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು

ನವಲಗುಂದ : ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಮಹೇಶ್ ಗೌಡ ಮರಿಗೌಡರ್ ಎಂಬುವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಬೆಳೆದ ಹತ್ತಿ ಬೆಳೆ ಮತ್ತು ನಾಲ್ಕು ಎಕರೆಯಲ್ಲಿ ಬೆಳೆದ ಕಡಲೆ ಬೆಳೆ ವರುಣನ ಅಬ್ಬರಕ್ಕೆ ತುತ್ತಗಿದ್ದರೂ ಇದುವರೆಗೂ ಯಾವ ಅಧಿಕಾರಿಗಳು ಸಹ ಇತ್ತ ತಿರುಗಿ ಸಹ ನೋಡದೆ ಇರೋದು, ಈಗ ರೈತನಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.

ಈಗಾಗಲೇ ಮಳೆಗೆ ಸಿಲುಕಿದ ಹತ್ತಿ ಸಂಪೂರ್ಣ ಮಳೆಗೆ ಕೆಂಪು ಬಣ್ಣಕ್ಕೆ ತಿರುಗಿದ್ದು, ಕಡಲೆ ಬೆಳೆಗೆ ಸಿಡಿ ರೋಗ ಲಕ್ಷಣಗಳು ಕಾಣುತ್ತಿವೆ. ಇದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡಲು ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

01/12/2021 11:53 am

Cinque Terre

54.82 K

Cinque Terre

1

ಸಂಬಂಧಿತ ಸುದ್ದಿ