ಕಲಘಟಗಿ:2019-20 ನೇ ಸಾಲಿನ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಜಮೆ ಮಾಡದೇ ಇದ್ದರೆ, ರೈತರೊಂದಿದೆ ಸೇರಿ ಹೋರಾಟ ಮಾಡಲಾಗುವುದು ಎಂದು ಶಾಸಕ ಸಿ ಎಂ ನಿಂಬಣ್ಣವರ ಎಚ್ಚರಿಸಿದರು.
ಅವರು ಪಟ್ಟಣದಲ್ಲಿ ನಾಗರಿಕ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕಲಘಟಗಿ ಕ್ಷೇತ್ರದಲ್ಲಿ ಅತಿವೃಷ್ಠಿಯಿಂದ 2019-20 ರಲ್ಲಿ ಕಂಡು ಕೇಳಲಾರದ ರೀತಿಯಲ್ಲಿ ದೊಡ್ಡ ಪ್ರಮಾಣದ ಬೆಳೆ ನಷ್ಟ ಉಂಟಾಗಿದ್ದರು,ಬೆಳೆ ವಿಮಾ ಕಂಪನಿಗಳು ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ವಿಮಾ ಹಣ ಬಿಡುಗಡೆ ಮಾಡಿಲ್ಲ, ಶೀಘ್ರ ವಿಮೆಯ ಹಣ ಅರ್ಹ ರೈತರಿಗೆ ಬಿಡುಗಡೆ ಮಾಡದೇ ಇದ್ದರೆ ಖಾಸಗಿ ವಿಮಾ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದರು, ಕಾರಣ ವಿಮಾ ಕಂಪನಿಗಳು ರೈತರ ಸಂಕಷ್ಟ ಅರಿತು ಅವರ ನೆರವಿಗೆ ಬರ ಬೇಕು ಎಂದು ಆಗ್ರಹಿಸಿದರು.
Kshetra Samachara
05/10/2020 04:47 pm